ಅಭಿಪ್ರಾಯ / ಸಲಹೆಗಳು

ಆರ್ ಸಿ ಎಚ್

RCH

ಆರ್.ಸಿ.ಹೆಚ್‌ತಂತ್ರಾOಶ:

ಆರ್.ಸಿ.ಹೆಚ್ ( ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ)ತಂತ್ರಾOಶವು ವೆಬ್‌ಆಧಾರಿತಕೇಂದ್ರಿಕೃತ ತಂತ್ರಾAಶವಾಗಿದ್ದು ಅರ್ಹದಂಪತಿ, ಗರ್ಭಿಣಿ ಮಹಿಳೆ ಮತ್ತು ಶಿಶುವಿಗೆ ನೀಡುವಎಲ್ಲಾ ಸೇವೆಗಳನ್ನು ಅನುಸರಣೆ ಮಾಡಲು ಉಪಯೋಗಿಸಲಾಗುತ್ತಿದೆ. ಇದರಿಂದ ಫಲಾನುಭವಿಗಳ ಆರಂಭಿಕ ಗುರುತಿಸುವಿಕೆ ಹಾಗೂ ಅನುಸರಣೆ ಮಾಡಲು ಅನುಕೂಲವಾಗಿದೆ ಹಾಗೂ ಗರ್ಭಿಣಿ ಮಹಿಳೆಯ ಪ್ರಸವಪೂರ್ವಚಿಕಿತ್ಸೆ, ಹೆರಿಗೆಯ ಸಂದರ್ಭದಲ್ಲಿನಚಿಕಿತ್ಸೆ, ಪ್ರಸವಾನಂತರದ ಚಿಕಿತ್ಸೆ ಹಾಗೂ ಶಿಶುವಿನ ಸಂಪೂರ್ಣರೋಗ ನಿರೋಧಕ ಸೇವೆಗಳನ್ನು ಸಕಾಲಿಕ ನೀಡಬಹುದಾಗಿದೆ. ಈ ಹಿಂದೆ ಇದ್ದಂತಹ ಎಮ್.ಸಿ.ಟಿ.ಎಸ್ (ತಾಯಿ ಮತ್ತು ಮಕ್ಕಳ ಅನುಸರಣಾ ವ್ಯವಸ್ಥೆ) ಗೆ ಹಲವಾರು ವೈಶಿಷ್ಟö್ಯಗಳನ್ನು ಸೇರಿಸುವ ಮೂಲಕ ಆರ್.ಎಮ್.ಎನ್.ಸಿ.ಹೆಚ್.ಎ ಕಾರ್ಯಕ್ರಮದ ಅವಶ್ಯಕತೆಯನ್ನು ಪೂರೈಸಲು ಸಹ ಆರ್.ಸಿ.ಹೆಚ್ ತಂತ್ರಾAಶವನ್ನು ವಿನ್ಯಾಸಗೊಳಿಸಲಾಗಿದೆ.

ಆರ್.ಸಿ.ಹೆಚ್ ತಂತ್ರಾAಶವನ್ನು ರಾಜ್ಯದಲ್ಲಿ ಅಕ್ಟೋಬರ್ ೨೦೧೯ ರಿಂದ ಚಾಲನೆಗೊಳಿಸಲಾಗಿದೆ ಹಾಗೂ ೨೦೧೯-೨೦ ನೇ ಸಾಲಿನಲ್ಲಿ ಸುಮಾರು ೮೯% ಗರ್ಭಿಣಿ ಮಹಿಳೆಯರನ್ನು ಹಾಗೂ ೮೯.೫೧% ಶಿಶುಗಳನ್ನು ನೋಂದಾಯಿಸಲಾಗಿದೆ.

ಆರ್.ಸಿ.ಹೆಚ್ ಪೋರ್ಟಲ್ ನಿಂದ ಫಲಾನುಭವಿಗಳಿಗೆ ಅಪೇಕ್ಷಿತಸೇವೆಗಳ ಬಗ್ಗೆ ಮಾಹಿತಿ ನೀಡಲು, ಸರ್ಕಾರಿ ಯೋಜನೆಗಳು, ಸೌಲಭ್ಯಗಳು, ಪ್ರಯೋಜನಗಳ ಬಗ್ಗೆ ತಿಳಿಸಲು, ಪಡೆಯಬೇಕಾಗಿರುವ ಚಿಕಿತ್ಸೆಗಳ ಸೇವಾ ವಿವರವನ್ನು ಮುಂಗಡ ತಿಳಿಯಲು ಸಹಾಯಕಾರಿಯಾಗಿದೆ. ಇದಲ್ಲದೇ ಉತ್ತಮ ಸಂವಹನ ನಡೆಸಲು ಆರೋಗ್ಯ ಸಹಾಯವಾಣಿಯ ಲಭ್ಯತೆಯು ಇದೆ.

ಆರ್.ಸಿ.ಹೆಚ್. ಪೋರ್ಟಲ್ ನಿಂದಕಿರಿಯ ಮಹಿಳಾ ಆರೋಗ್ಯ ಸಹಾಯಕಿ / ಆಶಾ ಕಾರ್ಯಕರ್ತೆಯರಿಗೆ ಕಾರ್ಯ ಯೋಜನೆಗಳನ್ನು ಸಿದ್ಧಪಡಿಸಲು,  ಹಿರಿಯ ಮೇಲ್ವಿಚಾರಕರಿಂದ ಉತ್ತಮ ಮಾರ್ಗದರ್ಶನ ಪಡೆಯಲು, ಮೈಕ್ರೊ ಪ್ಲಾನ್‌ಗಳನ್ನು ಸಿದ್ಧಪಡಿಸಲು, ಪ್ರೋತ್ಸಾಹಧನವನ್ನು ವಿತರಿಸಲು ಅನುಕೂಲಕಾರಿಯಾಗಿದೆ.

ಆರ್.ಸಿ.ಹೆಚ್. ಪೋರ್ಟಲ್ ನಿಂದರಾಜ್ಯ ಮಟ್ಟದ ಅಧಿಕಾರಿಗಳು,ಜಿಲ್ಲಾ, ತಾಲ್ಲೂಕು ಆರೋಗ್ಯಾಧಿಕಾರಿಗಳಿಗೆ ಯೋಜನೆಗಳನ್ನು ರೂಪಿಸಲು, ಲಸಿಕೆಗಳನ್ನು ಪೂರೈಸಲು, ವೈಯಕ್ತಿಕ ಹಾಗೂ ಗುಂಪು ಸಂದೇಶಗಳನ್ನು ಕಳುಹಿಸಲು, ಗಂಡಾತರ ಗರ್ಭಿಣಿ ಮತ್ತು ಕಡಿಮೆ ತೂಕವುಳ್ಳ ಮಕ್ಕಳು, ತಾಯಿ ಮರಣ ಮತ್ತು ಶಿಶು ಮರಣಗಳನ್ನು ನಿಕಟವಾಗಿ ಮೇಲ್ವಿಚಾರಣೆ ನಡೆಸಲು ಅನುಕೂಲಕರಿಯಾಗಿದೆ.

ಸದರಿ ಆರ್.ಸಿ.ಹೆಚ್ ತಂತ್ರಾAಶವನ್ನುಇನ್ನುಳಿದ ಇಲಾಖೆಗಳೊಂದಿಗೆ ಉದಾ : ಜನನ ಪ್ರಮಾಣಪತ್ರ ವನ್ನು ನೀಡಲು (ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ) ಹಾಗು ಮಹಿಳಾ ಮತ್ತು ಮಕ್ಕಳ ಇಲಾಖೆಯಿಂದ ನೀಡಲಾಗುವ ಸೇವೆಗಳನ್ನು ಪೂರೈಸುವ ತಂತ್ರಾAಶಕ್ಕೆ ಸಮನ್ವಯಗೊಳಿಸಲಾಗುತ್ತಿದೆ.

 

ಇತ್ತೀಚಿನ ನವೀಕರಣ​ : 18-06-2021 12:01 PM ಅನುಮೋದಕರು: MD NHMಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ರಾಷ್ಟ್ರೀಯ ಆರೋಗ್ಯ ಅಭಿಯಾನ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080