ಅಭಿಪ್ರಾಯ / ಸಲಹೆಗಳು

ಆಶಾ

ಸಮುದಾಯ ಮತ್ತು ಆರೋಗ್ಯ ವ್ಯವಸ್ಥೆಯ ನಡುವೆ ಕಾರ್ಯನಿರ್ವಹಿಸುವ ದೃಷ್ಠಿಯಿಂದ ಆಶಾ ಕಾರ್ಯಕರ್ತೆಯನ್ನು ಸಮುದಾಯದಿಂದ ಗುರುತಿಸಿ ಆಯ್ಕೆ ಮಾಡಲಾಗಿದೆ. ಈಕೆಯು ಆರೋಗ್ಯ ಸೇವೆಗಳ ಸೇವಾ ಪೂರೈಕೆದಾರಳಾಗಿಯೂ, ಆರೋಗ್ಯ ವ್ಯವಸ್ಥೆಯ ಉತ್ತಮೀಕರಣಕ್ಕೆ ಸಮುದಾಯ ಸಹಭಾಗಿತ್ವಕ್ಕೆ ಸಂಘಟಕಳಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾಳೆ.ಗ್ರಾಮೀಣ ಪ್ರದೇಶದಲ್ಲಿ ೧೦೦೦ ಮತ್ತು ನಗರ ಪ್ರದೇಶದ ಕೊಳಗೇರಿ ಮತ್ತು ಹಿಂದುಳಿದ ಪ್ರದೇಶಗಳಲ್ಲಿ ೨೫೦೦ ಜನಸಂಖ್ಯೆಗೆ ಒಬ್ಬರಂತೆ ಆಶಾ ಕಾರ್ಯಕರ್ತೆಯರನ್ನು ಗುರುತಿಸಲಾಗಿದೆ.೪೨೫೨೪ (ಗ್ರಾಮೀಣ-೩೯೧೯೫, ನಗರ-೩೩೨೯) ಆಶಾ ಕಾರ್ಯಕರ್ತೆಯರ ಹುದ್ದೆಗಳು  ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಮಂಜೂರಾಗಿದ್ದು, ಪ್ರಸ್ತುತ ೪೧೭೮೫ ಆಶಾ ಕಾರ್ಯಕರ್ತೆಯರು ಕಾರ್ಯನಿರ್ವಹಿಸುತ್ತಿದ್ದಾರೆ.

ಆಶಾ ಕಾರ್ಯಕರ್ತೆಯರಿಗೆ ರಾಜ್ಯ ಸರ್ಕಾರದಿಂದ ಮಾಸಿಕ ನಿಶ್ಚಿತ ಗೌರವಧನವಾಗಿ ರೂ.೪೦೦೦/-ಗಳನ್ನು ನೀಡಲಾಗುತ್ತಿದೆ.  ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಒಟ್ಟು ೩೭ ಚಟುವಟಿಕೆಗಳಿಗೆ ಪ್ರೋತ್ಸಾಹಧನವನ್ನು ನೀಡುತ್ತಿದ್ದು, ಇದರಲ್ಲಿ ಪ್ರತಿ ಮಾಹೆಗೆ ಎಂಟು ಆವರ್ತಕ ಮತ್ತು ನಿಯಮಿತ ಚಟುವಟಿಕೆಗಳಿಗೆ ರೂ.೨೦೦೦/- ಗಳನ್ನು ನೀಡಲಾಗುತ್ತಿದ್ದು, ಇನ್ನುಳಿದಂತೆ ೨೯ ಚಟುವಟಿಕೆಗಳಿಗೆ ಕಾರ್ಯನಿರ್ವಹಣಾ ಪ್ರೋತ್ಸಾಹಧನವನ್ನು ನೀಡಲಾಗುತ್ತಿದೆ. 

ಆಶಾ ಕಾರ್ಯಕರ್ತೆಯರಿಗೆ  ರಾಷ್ಟ್ರೀಯ  ಆರೋಗ್ಯ ಅಭಿಯಾನದಡಿ ನೀಡಲಾಗುವ ಪ್ರೋತ್ಸಾಹಧನವನ್ನು ಕಾಲಮಿತಿಯೊಳಗೆ ನೀಡಲು ಮತ್ತು ಮೇಲ್ವಿಚಾರಣೆ ಮಾಡಲು ಆಶಾನಿಧಿ ತಂತ್ರಾಂಶವನ್ನು ವಿನ್ಯಾಸಗೊಳಿಸಲಾಗಿದೆ.

ಪ್ರತಿ ಆಶಾ ಕಾರ್ಯಕರ್ತೆಯು ಸರಾಸರಿ ೨೫೦-೩೦೦ ಕುಟುಂಬಗಳ ಜೊತೆ ನಿಕಟ ಸಂಪರ್ಕವನ್ನು ಹೊಂದಿದ್ದು, ಕೆಳಕಂಡ ಚಟುವಟಿಕೆಗಳನ್ನು ನಿರ್ವಹಿಸುತ್ತಿದ್ದಾರೆ.

ಆಶಾ ಕಾರ್ಯಕರ್ತೆಯು ಕೆಳಕಂಡ ಚಟುವಟಿಕೆಗಳನ್ನು ಕಡ್ಡಾಯವಾಗಿ ನಿರ್ವಹಿಸಬೇಕಾಗುತ್ತದೆ.

 • ಮನೆಭೇಟಿ
 • ಗ್ರಾಮ/ನಗರ ಆರೋಗ್ಯ ಮತ್ತು ಪೌಷ್ಠ್ಠಿಕ ದಿನಾಚರಣೆಗೆ ಹಾಜರಾಗುವುದು
 • ಆರೋಗ್ಯ ಸಂಸ್ಥೆಗಳಿಗೆ ಭೇಟಿ ನೀಡುವುದು.
 • ತನ್ನ ಕಾರ್ಯಕ್ಷೇತ್ರದ ವ್ಯಾಪ್ತಿಯಲ್ಲಿ ಜಾಗೃತಿ ಸಭೆಗಳನ್ನು ಸಂಘಟಿಸುವುದು.
 • ಆರೋಗ್ಯ ದಾಖಲೆಗಳನ್ನು ನಿರ್ವಹಿಸುವುದು.

ಇದಲ್ಲದೆ ಸಮುದಾಯಕ್ಕೆ  ಈ ಕೆಳಗಿನ ವಿಷಯಗಳ ಬಗ್ಗೆ ಅರಿವು  ಮೂಡಿಸುವುದು:

 • ಪೌಷ್ಠಿಕಾಂಶ
 • ಮೂಲಭೂತ ನೈರ್ಮಲ್ಯ ಮತ್ತುಆರೋಗ್ಯಕರ ಪದ್ದತಿಗಳು
 • ಆರೋಗ್ಯಕರ ಜೀವನ
 • ಪ್ರಸ್ತುತ ಲಭ್ಯವಿರುವ ಆರೋಗ್ಯ ಸೇವೆಗಳು ಮತ್ತು ಇವುಗಳ ಸದುಪಯೋಗ

ಮಹಿಳೆಯರು ಮತ್ತು ಕುಟುಂಬದವರಿಗೆ ಆಪ್ತ ಸಮಾಲೋಚನೆ

 • ಹೆರಿಗೆಯ ಸಿದ್ದತೆ
 • ಸುರಕ್ಷಿತ ಹೆರಿಗೆಯ ಪ್ರಾಮುಖ್ಯತೆ
 • ಸ್ತನ್ಯ ಪಾನದ ಪ್ರಾಮುಖ್ಯತೆ
 • ಲಸಿಕೆ
 • ಗರ್ಭನಿರೋಧಕಗಳ ಮಹತ್ವ
 • ಲೈಂಗಿಕ ಸೋಂಕುಗಳನ್ನು ತಡೆಗಟ್ಟುವಿಕೆ

 

ಆಶಾ ಕಾರ್ಯಕರ್ತೆಯರ ಕಾರ್ಯನಿರ್ವಹಣೆಯ ಬೆಂಬಲಿತ ಮೇಲ್ವಿಚಾರಣೆ ಮತ್ತು ಸಾಮರ್ಥ್ಯಾಭಿವೃದ್ದಿಗೆ  ಕೆಳಕಂಡ  ಮೇಲ್ವಿಚಾರಣಾ  ವ್ಯವಸ್ಥೆಯಿದೆ.

೧.           ಆಶಾ ಸುಗಮಕಾರರು : ಇವರು ಆಶಾ ಕಾರ್ಯಕರ್ತೆಯರಲ್ಲಿ ಒಬ್ಬರಾಗಿದ್ದು, ಸಂವಹನ ಮತ್ತು ನಾಯಕತ್ವ ಗುಣವುಳ್ಳ ಆಶಾ ಕಾರ್ಯಕರ್ತೆಯರಲ್ಲಿ ಒಬ್ಬರನ್ನು  ಸುಗಮಕಾರರಾಗಿ ಪ್ರತಿ ೨೦ ಜನ ಆಶಾ ಕಾರ್ಯಕರ್ತೆಯರಿಗೆ ಒಬ್ಬರಂತೆ ಗುರುತಿಸಲಾಗಿದೆ. ಪ್ರಸ್ತುತ ೧೬೭೯ ಆಶಾ ಸುಗಮಕಾರರು ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ತಿಂಗಳಲ್ಲಿ ೨೦ ದಿನ ಆಶಾ ಸುಗಮಕಾರರಾಗಿ ಕಾರ್ಯನಿರ್ವಹಿಸುತ್ತಾರೆ

 ೨.           ತಾಲ್ಲೂಕು ಮತ್ತು ಜಿಲ್ಲಾ ಆಶಾ ಮೇಲ್ವಿಚಾರಕರು :  ಪ್ರತಿ ತಾಲ್ಲೂಕು ಮತ್ತು ಜಿಲ್ಲಾ ಹಂತದಲ್ಲಿ ತಾಲ್ಲೂಕು ಮತ್ತು ಜಿಲ್ಲಾ ಆಶಾ ಮೇಲ್ವಿಚಾರಕರಿದ್ದು, ಆಶಾ ಕಾರ್ಯಕರ್ತೆಯರ ತರಬೇತಿ, ಕ್ಷೇತ್ರ ಮಟ್ಟದಲ್ಲಿ ಮೇಲ್ವಿಚಾರಣೆ ಮತ್ತು ಪ್ರೋತ್ಸಾಹಧನದ ಪಾವತಿ ಮತ್ತು ದಾಖಲೀಕರಣದಂತಹ ಚಟುವಟಿಕೆಗಳನ್ನು ನಿರ್ವಹಿಸುತ್ತಾರೆ.

 ೩.           ಜಿಲ್ಲಾ ನೋಡಲ್ ಅಧಿಕಾರಿಗಳು : ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಆರ್.ಸಿಹೆಚ್ ಅಧಿಕಾರಿಗಳಿಗೆ  ಜಿಲ್ಲಾ ನೋಡಲ್ ಅಧಿಕಾರಿಗಳಾಗಿ ಜವಾಬ್ದಾರಿ ನೀಡಲಾಗಿದೆ.

 ೪.           ರಾಜ್ಯ ಆಶಾ ಕಾರ್ಯಕ್ರಮ ವಿಭಾಗ : ಹಿರಿಯತಜ್ಞರು/ಉಪ ನಿರ್ದೇಶಕರ ಮಟ್ಟದ ಅಧಿಕಾರಿಗಳು ರಾಜ್ಯ ನೋಡಲ್ ಅಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಿದ್ದು, ಇವರ ಅಧೀನದಲ್ಲಿ  ರಾಷ್ಟ್ರೀಯ ಆರೋಗ್ಯ ಅಭಿಯಾನದಿಂದ ಸಮಾಲೋಚಕರು (ಟೀಮ್ ಲೀಡರ್)-೧ ಕಾರ್ಯಕ್ರಮ ವ್ಯವಸ್ಥಾಪಕರು-೧, ಪ್ರಾದೇಶಿಕ ಸಂಯೋಜಕರು-೪,  ಕಾರ್ಯಕ್ರಮ ಸಹಾಯಕರು-೧, ಲೆಕ್ಕ ಸಹಾಯಕರು-೧, ದತ್ತಾಂಶ ಸಹಾಯಕರು-೧ ಕಾರ್ಯನಿರ್ವಹಿಸುತ್ತಿದ್ದು, ತರಬೇತಿ, ದಾಖಲೀಕರಣ, ಖರೀದಿ, ಮೇಲ್ವಿಚಾರಣೆ, ಅನುದಾನ ನಿರ್ವಹಣೆಯಂತಹ ಕಾರ್ಯಚಟುವಟಿಕೆಗಳನ್ನು ನಿರ್ವಹಿಸಲಾಗುತ್ತಿದೆ.

 

 

ಇತ್ತೀಚಿನ ನವೀಕರಣ​ : 12-09-2023 03:47 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ರಾಷ್ಟ್ರೀಯ ಆರೋಗ್ಯ ಅಭಿಯಾನ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080