ಅಭಿಪ್ರಾಯ / ಸಲಹೆಗಳು

ರಾಷ್ಟ್ರೀಯ ನಗರ ಆರೋಗ್ಯ ಅಭಿಯಾನ

ಹಿನ್ನಲೆ ಸಾರಾಂಶ

ನಗರ ಪ್ರದೇಶಗಳಲ್ಲಿ ವಾಸಿಸುವವ ಜನಸಂಖ್ಯೆಯ ಅನುಪಾತ 2000 ಇಸವಿಯ ನಂತರ ನಾಗಾಲೋಟದಿಂದ ಬೆಳವಣಿಗೆಯಾಗಿರುವುದು ಕಂಡುಬರುತ್ತದೆ. ನಗರೀಕರಣ, ಮೂಲಭೂತ ಸೌಕರ್ಯ, ಶಿಕ್ಷಣ, ನಿರಂತರ ಉದ್ಯೋಗವಕಾಶಗಳು ಮುಂತಾದ ಆಕರ್ಷಣೆಗಳಿಂದ ನಗರ ಪ್ರದೇಶಗಳಿಗೆ ಹಳ್ಳಿಗಾಡಿನಿಂದ ವಲಸೆ ಬರುವ ಪ್ರಮಾಣ ಹೆಚ್ಚಾಗಿರುತ್ತದೆ. ವಲಸೆ ಬಂದ ಬಹುತೇಕ ಜನರು ತಾತ್ಕಾಲಿಕ ವಸತಿ-ಗುಡಿಸಲುಗಳಲ್ಲಿ ಮತ್ತು ಕೊಳಗೇರಿಗಳಲ್ಲಿ ತಂಗುವುದರಿಂದ ಅಲ್ಲಿಯ ಜನಸಾಂದ್ರತೆ ಜಾಸ್ತಿಯಾಗುತ್ತದೆ. ಈ ರೀತಿ ನೆಲಸುವ ಜನರಲ್ಲಿ ಆರೋಗ್ಯ ಸಮಸ್ಯೆಗಳೂ ಅಧಿಕವಾಗಿರುತ್ತವೆ. ಈ ಆರೋಗ್ಯ ಸಮಸ್ಯೆಗಳನ್ನು ಮನಗಂಡ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು 2013-14 ನೇ ಸಾಲಿನಿಂದ ಪರಿಹಾರರಾರ್ಥವಾಗಿ “ನಗರ ಆರೋಗ್ಯ ಅಭಿಯಾನ”ವನ್ನು ಒಟ್ಟಾರೆ ರಾಷ್ಟ್ರೀಯ ಆರೋಗ್ಯ ಅಭಿಯಾನದ ಒಂದು ಉಪಾಂಗವಾಗಿ ಅನುಷ್ಠಾನಗೊಳಿಸಿರುತ್ತವೆ. 20.01.2014 ರಂದು ಬೆಂಗಳೂರು ನಗರದಲ್ಲಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ರಾಷ್ಟ್ರ ಮಟ್ಟದ ಅಭಿಯಾನ ಕಾರ್ಯಕ್ರಮವನ್ನು ಲೋಕಾರ್ಪಣೆ ಮಾಡಿರುತ್ತಾರೆ.

ಗುರಿ:

ನಗರದಲ್ಲಿ ವಾಸಿಸುವ ಬಡವರ ಮತ್ತು ಆರೋಗ್ಯ ವಂಚಿತ ಜನರ ಆರೋಗ್ಯ ಸುಧಾರಣೆಗಾಗಿ ಅದರಲ್ಲೂ ಮುಖ್ಯವಾಗಿ ಗುಡಿಸಲಿನಲ್ಲಿ ವಾಸಿಸುವವರ ಮತ್ತು ಇತರೆ ಸೌಕರ್ಯ ರಹಿತ ಸಮುದಾಯದವರಿಗೆ ಪಕ್ಷಪಾತವಿಲ್ಲದೆ ಗುಣಾತ್ಮಕ ಆರೋಗ್ಯ ರಕ್ಷಣೆ ಸುಗಮವಾಗಿ ಒದಗಿಸುವ ಗುರಿಯನ್ನಿಟ್ಟುಕೊಂಡು:

 • ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಪುನರ್‌ರಚನೆ,
 • ಪಾಲುಗಾರಿಕೆ
 • ಸಮುದಾಯ ಸಬಲೀಕರಣ
 • ಸಕ್ರಿಯವಾಗಿ ನಗರ ಸ್ಥಳೀಯ ಸಂಸ್ಥೆಗಳ ಕ್ರಿಯಾತ್ಮಕವಾಗಿ ಪಾಳ್ಗೊಳ್ಳುವ ಮುಖಾಂತರ ನಿಲುಕುವ ಆರೋಗ್ಯ ಸೇವೆಗಳನ್ನು ಒದಗಿಸುವ ಗುರಿಯನ್ನು ಹೊಂದಲಾಗಿರುತ್ತದೆ.

ಪ್ರಾರಂಭ :

 • ಮೇ 1, 2013 ರಂದು ರಾಷ್ಟ್ರೀಯ ಆರೋಗ್ಯ ಅಭಿಯಾನದ ಉಪಾಂಗವಾಗಿ ರಾಷ್ಟ್ರೀಯ ನಗರ ಆರೋಗ್ಯ ಅಭಿಯಾನವು ಪ್ರಾರಂಭವಾಗಿರುತ್ತದೆ.
 • 2.36 ಕೋಟಿ ನಗರ ಜನಸಂಖ್ಯೆಯು ವಿಶೇಷ ಆದ್ಯತಾ ಜನಸಂಖ್ಯೆಯಾಗಿರುತ್ತದೆ (ಜನಸಂಖ್ಯಾ ಸಮೀಕ್ಷೆ – 2011) .
 • ಮೆಟ್ರೊ ಪಾಲಿಟಿನ್ ನಗರವಾದ ಬೆಂಗಳೂರು ಮತ್ತು 50000 ಅಥವಾ ಅಧಿಕ ಜನಸಂಖ್ಯೆ ಹೊಂದಿರುವ 9 ನಗರ / ಪಟ್ಟಣಗಳು.
 • ಮಡಕೇರಿ, ಕೊಡಗು ಜಿಲ್ಲಾ ಕೇಂದ್ರ (32000 ಜನಸಂಖ್ಯೆ).

ವಿಶೇಷ ಆದ್ಯತಾ ಜನಸಂಖ್ಯೆ:

ಗುಡಿಸಲುಗಳಲ್ಲಿ ವಾಸಿಸುವರು ಮತ್ತು ಕಡಿಮೆ ಆದಾಯದಲ್ಲಿ ಜೀವನ ನಡೆಸುತ್ತಿರುವ ನೆರೆಹೊರೆಯವರು, ಸುಲಭವಾಗಿ ಖಾಯಿಲೆಗೆ ತುತ್ತಾಗುವ ಸಮುದಾಯದವರು ಅಂದರೆ ವಸತಿ ರಹಿತರು, ಚಿಂದಿ ಎತ್ತುವವರು, ಬೀದಿ ಮಕ್ಕಳು, ರಿಕ್ಷಾ ಎಳೆಯುವವರು ಮತ್ತು ಇತರೆ ವಲಸೆ ಬಂದ ಜನತೆ.

ಕಾರ್ಯಕ್ರಮ ಪ್ರಮುಖ ಅಂಶಗಳು:

 • ನಗರ ಯೋಜನೆ ಮತ್ತು ಮ್ಯಾಪಿಂಗ್ (ಸೌಲಭ್ಯ ಮತ್ತು ದುರ್ಬಲತೆ ಅಳತೆ)
 • ಕಾರ್ಯಕ್ರಮ ನಿರ್ವಹಣೆ
 • ಸೇವಾ ಪೂರೈಕೆದಾರರ ತರಬೇತಿ ಮತ್ತು ಮಾರ್ಗದರ್ಶನ
 • ಹೆಚ್ಚುವರಿ ಮಾನವಸಂಪನ್ಮೂಲ, ಅಗತ್ಯತೆಗನುಗುಣವಾಗಿ
 • ಮೂಲ ಸೌಕರ್ಯ ಬಲವರ್ಧನೆ (ನಿರ್ಮಾಣ/ ನವೀಕರಣ ಮತ್ತು ಮೇಲ್ದರ್ಜೆಗೇರಿಸುವುದು)
 • ಸಲಕರಣೆ ಮತ್ತು ಔಷಧ ಸಂಗ್ರಹಣೆ
 • ವಿಶೇಷ ಕ್ಷೇತ್ರ ಆರೋಗ್ಯ ಶಿಬಿರಗಳು
 • ನಿಯಂತ್ರಣ ಮತ್ತು ಗುಣಮಟ್ಟ ಭರವಸೆ
 • ಸಮುದಾಯ ಪ್ರಕ್ರಿಯೆ
 • ಸೇವಾ ಅವಿಷ್ಕಾರ
 • ನಗರ ಮಲೇರಿಯ ಬಲವರ್ಧನೆ
 • ಸಾರ್ವಜನಿಕ ಖಾಸಗಿ ಪಾಲುದಾರಿಕೆ
 • ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ
 • ಐ.ಇ.ಸಿ / ಬಿ.ಸಿ.ಸಿ ಚಟುವಟಿಕೆಗಳು
 • ಮಾಹಿತಿ ಮತ್ತು ಸಂವಹನಾ ತಂತ್ರಜ್ಞಾನ ಉಪಕ್ರಮಗಳು

ಮಾನವ ಸಂಪನ್ಮೂಲ

ಕಿರಿಯ ಮಹಿಳಾ ಆರೋಗ್ಯ ಸಹಾಯಕಿ

 • 10 ರಿಂದ 12 ಸಾವಿರ ಜನಸಂಖ್ಯೆಗೆ ಒಬ್ಬ ಕಿರಿಯ ಮಹಿಳಾ ಆರೋಗ್ಯ ಸಹಾಯಕಿ
 • ನಗರ ಉಪಕೇಂದ್ರಗಳಿಗೆ ಅವಕಾಶವಿರುವುದಿಲ್ಲ, ಆದರೆ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಅಸ್ತಿತ್ವಕ್ಕೆ ಬರುವ ತನಕ ಚಾಲ್ತಿಯಲ್ಲಿರುವ ಆರೋಗ್ಯ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುವುದು.
 • ಸಮುದಾಯದಲ್ಲಿ ಮತ್ತು ಅಂಗನವಾಡಿ ಕೇಂದ್ರಗಳಲ್ಲಿ ವಿಶೇಷ ಕ್ಷೇತ್ರ ಆರೋಗ್ಯ ಶಿಬಿರವನ್ನು ಹಮ್ಮಿಕೊಳ್ಳುವುದು.
 • ಕ್ಷೇತ್ರ ಭೇಟಿಗೆ ಸಂಚಾರ ಭತ್ಯ.

ಆಶಾ ಕಾರ್ಯಕರ್ತೆಯರು

 • 1000-2500 ಕೊಳಚೆ ಪ್ರದೇಶದ ಜನಸಂಖ್ಯೆಗೆ (200-500 ಕುಟುಂಬಗಳಿಗೆ) ಒಬ್ಬ ಆಶಾ ಕಾರ್ಯಕರ್ತೆಯನ್ನು ಆಯ್ಕೆ ಮಾಡಿ ತರಬೇತಿ ನೀಡುವುದು.
 • ಇತರೇ ಕಾರ್ಯಕ್ರಮಗಳಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಮುದಾಯ ಕಾರ್ಯಕರ್ತರ ಸೇವೆಯನ್ನು ಬಳಸಿಕೊಳ್ಳುವುದು.

ಮಹಿಳಾ ಆರೋಗ್ಯ ಸಮಿತಿ

 • ಕೊಳಗೇರಿಗಳಲ್ಲಿ 10-12 ಜನ ಮಹಿಳೆಯರ ನೆರೆಹೊರೆ ಗುಂಪು.
 • 50-100 ಕೊಳಚೆಪ್ರದೇಶದ ಕುಟುಂಬಗಳನ್ನೊಳಗೊಂಡಿರುತ್ತದೆ.
 • ಚಾಲ್ತಿಯಲ್ಲಿರುವ ಸಮುದಾಯ ಆಧಾರಿತ ಸಂಸ್ಥೆಗಳ ಉಪಯೋಗ
 • ರಾಷ್ಟ್ರೀಯ ನಗರ ಆರೋಗ್ಯ ಅಭಿಯಾನದಡಿಯಲ್ಲಿ ವಾರ್ಷಿಕವಾಗಿ ರೂ.5000/- ಗಳನ್ನು ಮುಕ್ತನಿಧಿ ಮತ್ತು ಸಾಮರ್ಥ್ಯ ಬಲವರ್ದನೆಗೆ ನೀಡಲಾಗುವುದು.

ಬೀಜ ತಂತ್ರಗಳು:

ಮೂಲ ಸೌಕರ್ಯ ಬಲವರ್ಧನೆ

 •  ಹೊಸದಾಗಿ ಮೂಲಸೌಕರ್ಯಗಳನ್ನು ಪ್ರಾರಂಭಿಸುವುದು.
 • ವಿಶ್ಲೇಷಣೆಯ ನಂತರ ಚಾಲ್ತಿಯಲ್ಲಿರುವ ನಗರ ಪ್ರಾಥಮಿಕ ಆರೋಗ್ಯ ರಚನೆಯನ್ನು ವಿವೇಚನಾತ್ಮಕವಾಗಿ ಪುನರ್ವಿಂಗಡಿಸುವುದು ಮತ್ತು ಬಲವರ್ಧಿಸುವುದು. (ನಗರ ಕುಟುಂಬ ಕಲ್ಯಾಣ ಕೇಂದ್ರ, ನಗರ ಆರ್.ಸಿ.ಹೆಚ್. ಕೇಂದ್ರಗಳು, ಔಷಧಾಲಯ ಮತ್ತು ಹೆರಿಗೆ ಆಸ್ಪತ್ರೆ).
 • ಹೆಲ್ತ್ಕಿಯೋಸ್ಕ್ ಪ್ರಾರಂಭಿಸುವುದು.

ಮಾನವ ಸಂಪನ್ಮೂಲ ವೃದ್ಧಿ

 •  ವಿಶ್ಲೇಷಣೆಯ ನಂತರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ನಗರ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಸಾಮಾನ್ಯ ಕರ್ತವ್ಯ ನಿರತ ವೈದ್ಯಾಧಿಕಾರಿಗಳನ್ನು, ತಜ್ಞರನ್ನು ಮತ್ತು ಅರೆವೈದ್ಯಕೀಯ ಸಿಬ್ಬಂದಿಯನ್ನು ಪಡೆಯುವುದು.

ಸಮುದಾಯ ಪಾಲ್ಗೊಳ್ಳುವಿಕೆ

 •  ಕೊಳಚೆ ಪ್ರದೇಶಗಳಲ್ಲಿ ಮಹಿಳಾ ಆರೋಗ್ಯ ಸಮಿತಿಯನ್ನು ಮತ್ತು ಆಶಾ ಕಾರ್ಯಕರ್ತೆಯರನ್ನು ನೇಮಿಸುವುದು
 • ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ನಗರ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಚುನಾಯಿತ ಪ್ರತಿನಿಧಿಯನ್ನೊಳಗೊಂಡ ಆರೋಗ್ಯ ರಕ್ಷಾ ಸಮಿತಿ ರಚಿಸುವುದು.

ನಗರ ಸ್ಥಳೀಯ ಸಂಸ್ಥೆಗಳು

 •  ನಗರ ಸ್ಥಳೀಯ ಸಂಸ್ಥೆಗಳನ್ನು, ಕಾರ್ಯಕ್ರಮ ರಚನೆಗೆ, ಅನುಷ್ಠಾನ ಮತ್ತು ಉಸ್ತುವಾರಿ ಮಾಡಲು ಜಿಲ್ಲಾ   ಆರೋಗ್ಯ ಸಂಸ್ಥೆಗಳಲ್ಲಿ ಅಂತರ್ಗತ ಮಾಡಿಕೊಳ್ಳುವುದು.
 • ಬೆಂಗಳೂರು ಒಂದು ಮಹಾನಗರವಾಗಿರುವುದರಿಂದ, ಬೆಂಗಳೂರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘವನ್ನು ಸ್ವತಂತ್ರ ಅನುಷ್ಠಾನ ಘಟಕವಾಗಿ ರಚಿಸುವುದು.

ಅಂತರ್ ಮತ್ತು ಆಂತರ ಇಲಾಖೆ ಸಹಕಾರ

 •  ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮ ಮತ್ತು ಇತರೆ ಸಚಿವಾಲಯಗಳ ಜೊತೆಗೆ ಸಮನ್ವಯ ಮಾಡಿಕೊಳ್ಳುವುದು (ಕುಡಿಯುವ ನೀರು, ನೈರ್ಮಲೀಕರಣ, ವಸತಿ, ಮಹಿಳಾ ಹಾಗೂ ಮಕ್ಕಳ ಅಭಿವೃದ್ಧಿ).

ಪಾಲುದಾರರ ಸಾಮರ್ಥ್ಯ ಬಲವರ್ಧನೆ

 • ನಗರ ಸ್ಥಳೀಯ ಸಂಸ್ಥೆಗಳು / ವೈದ್ಯಕೀಯ ಮತ್ತು ಅರೆವೈದ್ಯಕೀಯ ಸಿಬ್ಬಂದಿ / ಆಶಾ ಮತ್ತು ಮಹಿಳಾ ಅರೋಗ್ಯ ಸಮಿತಿ.

ಮಾಹಿತಿ ಮತ್ತು ಸಂವಹನಾ ತಂತ್ರಜ್ಞಾನದ ಉಪಯೋಗ

 

 • ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ನಗರ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಉತ್ತಮ ಸೇವೆಯನ್ನೊದಗಿಸಲು, ಸುಧಾರಿತ ಕಣ್ಗಾವಲು ಮತ್ತು ಉಸ್ತುವಾರಿಗೆ ಗಣಕಯಂತ್ರ ಮತ್ತು ಸಾಪ್ಟ್ ವೇರ್‌ಗಳನ್ನು ಒದಗಿಸುವುದು

ಸಂಜೆ ಚಿಕಿತ್ಸಾಲಯ

 • ಬೆಂಗಳೂರು ನಗರದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಅವಶ್ಯಕತೆ ಹಾಗೂ ಲಭತ್ಯೆಗನುಗುಣವಾಗಿ ವಿವಿಧ ತಜ್ಞರನ್ನು ಸಂಜೆ ಚಿಕಿತ್ಸಾಲಯದಲ್ಲಿ ಸೇವೆಯನ್ನು ಒದಗಿಸಲು ನಿಯೋಜಿಸುವುದು. ಇತರೆ ಜಿಲ್ಲೆಗಳಲ್ಲಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ತಜ್ಞರು ಎಂ.ಬಿ.ಬಿ.ಎಸ್. ವೈದ್ಯರನ್ನು ನಿಯೋಜಿಸುವುದು. ಇವರ ಸೇವೆಗೆ ಗಂಟೆಗನುಗುಣವಾಗಿ ಸಂಭಾವನೆಯನ್ನು ನೀಡಲಾಗುವುದು.

ಸಂಚಾರಿ ಆರೋಗ್ಯ ಘಟಕ

 • ಸಮುದಾಯದ ಸನಿಹದಲ್ಲಿ ಗುಣಾತ್ಮಕ ಪ್ರಾಥಮಿಕ ಹಂತದ ಆರೋಗ್ಯ ಸಂರಕ್ಷಣೆ ಸೇವೆಯನ್ನು ನೀಡುವುದು.

ಉಚಿತ ತಪಾಸಣೆ ಮತ್ತು ಔಷಧಿ

 

 • ನಗರ ಬಡ ಜನತೆಗೆ ಉಚಿತ ಶುಲ್ಕರಹಿತ ಪೂರ್ಣ ಚಿಕಿತ್ಸೆ ಒದಗಿಸುವುದು ಪ್ರಧಾನ ನೀತಿ ಮತ್ತು ಮುಖ್ಯ ಗುರಿಯಾಗಿರುತ್ತದೆ.

ಆರೋಗ್ಯ ಮತ್ತು ಕ್ಷೇಮ ಕೇಂದ್ರ

 • ಎಲ್ಲಾ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳನ್ನಾಗಿ ಮೇಲ್ದರ್ಜೆಗೇರಿಸುವುದು ಮತ್ತು ಯೋಗ ಚಟುವಟಿಕೆಯನ್ನು ಆಯೋಜಿಸುವುದು.
 • 12 ಪ್ರಾಥಮಿಕ ಸೇವೆಗಳ ಪ್ಯಾಕೇಜನ್ನು ಒದಗಿಸುವುದು

 

ಅಭಿಯಾನದಲ್ಲಿ 2016-17ನೇ ಸಾಲಿನಲ್ಲಿ ಕೈಗೊಳ್ಳಲಾದ ಉಪಕ್ರಮಗಳು:

 1. ಬೆಂಗಳೂರು ಮಹಾನಗರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ: ಬೆಂಗಳೂರು ಮಹಾನಗರದಲ್ಲಿ 198 ವಾರ್ಡಗಳು ಇರುತ್ತವೆ. ಅವುಗಳ ಪೈಕಿ ಆರೋಗ್ಯ ಸೇವೆಗಳ ದೃಷ್ಟಿಯಿಂದ ಕೇಂದ್ರ ಪ್ರದೇಶವಾಗಿರುವ 135 ವಾರ್ಡಗಳು ಬೆಂಗಳೂರು ಮಹಾನಗರ ಪಾಲಿಕೆಯಡಿಯಲ್ಲಿಯೂ ಮತ್ತು ಉಳಿದ ಹೊರ ವಲಯದ 63 ವಾರ್ಡಗಳು ಬೆಂಗಳೂರು ನಗರ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ವ್ಯಾಪ್ತಿಗೆ ಒಳಪಟ್ಟಿರುತ್ತವೆ. ಇವೆರಡನ್ನು ಒಗ್ಗೂಡಿಸಿ ನಗರ ಆರೋಗ್ಯ ಅಭಿಯಾನದ ಅನುಷ್ಠಾನಕ್ಕಾಗಿ ಬೆಂಗಳೂರು ನಗರ ಆರೋಗ್ಯ ಮತ್ತು ಕುಟುಂಬ ಕಲ್ಯಾಣದ ಸಂಘವನ್ನು ಬೆಂಗಳೂರು ಮಹಾನಗರ ಪಾಲಿಕೆ ಆಯುಕ್ತರ ಅಧ್ಯಕ್ಷತೆಯಡಿಯಲ್ಲಿ ರಚಿಸಿ ನೋಂದಣೆ ಮಾಡಲಾಗಿರುತ್ತದೆ. ತನ್ಮೂಲಕ ಅನುಷ್ಠಾನವನ್ನು ವಿಕೇಂದ್ರಿಕರಣಗೊಳಿಸಲಾಗಿರುತ್ತದೆ.
 2. ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳು: ಒಟ್ಟು 27 ಹೆರಿಗೆ ಆಸ್ಪತ್ರೆಗಳನ್ನೊಳಗೊಂಡಂತೆ ಬಿ.ಬಿ.ಎಂ.ಪಿ. ವ್ಯಾಪ್ತಿಯಲ್ಲಿದ್ದ 140 ಡಿಸ್ಪೆನ್ಸರಿ, ನಗರ ಕುಟುಂಬ ಕಲ್ಯಾಣ ಕೇಂದ್ರಗಳು, ಐ.ಪಿ.ಪಿ. ಆರೋಗ್ಯ ಕೇಂದ್ರಗಳನ್ನು ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನಾಗಿ ಕಾರ್ಯಾತ್ಮಕವಾಗಿ ಮೇಲ್ದರ್ಜೆಗೇರಿಸಲಾಗಿದೆ. ಇವುಗಳ ಪೈಕಿ 38 ಆರೋಗ್ಯ ಕೇಂದ್ರಗಳು ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿರುವ 63 ವಾರ್ಡಗಳಲ್ಲಿ ಬರುತ್ತವೆ. ಉಳಿಕೆ 102 ಕೇಂದ್ರಗಳು ಬಿ.ಎಂ.ಪಿ. ಕೇಂದ್ರ ಪ್ರದೇಶದಲ್ಲಿರುವ 135 ವಾರ್ಡಗಳಲ್ಲಿರುತ್ತವೆ. ಇದಲ್ಲದೆ, ಆದ್ಯತೆ ಮೇಲೆ ಕೊಳಗೇರಿಗಳಲ್ಲಿ ಅಥವಾ ಕೊಳಗೇರಿಗಳ ಸಮೀಪದಲ್ಲಿ 20 ನೂತನ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಪ್ರಾರಂಭಿಸಲಾಗಿರುತ್ತದೆ. ಇವುಗಳಲ್ಲಿ 10 ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಬಾಡಿಗೆ ಕಟ್ಟಡಗಳಲ್ಲಿ ಬಿ.ಬಿ.ಎಂ.ಪಿ. ಹೊರ ವಲಯದ 63 ವಾರ್ಡಳಲ್ಲಿ ಬರುವಂತೆ ಪ್ರಾರಂಭಿಸಲಾಗಿರುತ್ತದೆ. ಉಳಿಕೆ 10 ರಲ್ಲಿ 6 ನ್ನು ಲಭ್ಯವಿರುವ ಬಿ.ಬಿ.ಎಂ.ಪಿ. ಕಟ್ಟಡಗಳಲ್ಲೂ ಹಾಗೂ 4 ನ್ನು ಬಾಡಿಗೆ ಕಟ್ಟಡಗಳಲ್ಲಿ ಬಿ.ಬಿ.ಎಂ.ಪಿ.ಯ ಕೇಂದ್ರ ಪ್ರದೇಶದ 135 ವಾರ್ಡ್ಗಳಲ್ಲಿ ಕಾರ್ಯಾನುಷ್ಠಾನಗೊಳಿಸಲಾಗಿರುತ್ತದೆ. ಒಟ್ಟು 160 ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳು 2016-17ನೇ ಸಾಲಿನಿಂದ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿವೆ. ಉಳಿದಂತೆ ರಾಜ್ಯದ ಇನ್ನಿತರೆ 79 ನಗರ/ ಪಟ್ಟಣಗಳಲ್ಲಿ 205 ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಕಾರ್ಯಾನುಷ್ಠಾನಗೊಳಿಸಲಾಗಿರುತ್ತದೆ.
 3. ಆರೋಗ್ಯ ಕೇಂದ್ರಗಳಿಂನೀಡಲಾಗುತ್ತಿರುವ ಸೌಲಭ್ಯಗಳು:
 • ಪ್ರಯೋಗ ಶಾಲೆ: ಉಚಿತ ಮತ್ತು ಉನ್ನತ ತಂತ್ರಜ್ಞಾನದ ಪ್ರಯೋಗ ಶಾಲೆ ಸೇವೆ ನೀಡಲು ಸೆಮಿ-ಆಟೋ ಅನಲೈಸರ್‌ಗಳನ್ನು ಬಿ.ಬಿ.ಎಂ.ಪಿ. ಯಲ್ಲಿ ಒದಗಿಸಲಾಗಿದೆ. ಇತರೆಡೆಯಲ್ಲಿ ಹಂತ ಹಂತವಾಗಿ ಒದಗಿಸುವ ಯೋಜನೆಯಿರುತ್ತದೆ.
 • ರೋಗಿಗಳು ಮತ್ತವರ ಸಹವರ್ತಿಗಳಿಗೆ: ಸೇವೆಯನ್ನು ಪಡೆಯಲು ಆಗಮಿಸುವ ರೋಗಿಗಳು ಮತ್ತು ಅವರ ಸಹವರ್ತಿಗಳಿಗೆ ಅನುಕೂಲವಾಗುವಂತೆ ಆರಾಮದಾಯಕ ಆಸನಗಳು, ಶುದ್ದಕುಡಿಯುವ ನೀರು, ಆರೋಗ್ಯ ಶಿಕ್ಷಣಕ್ಕಾಗಿ ಟಿ.ವಿ. ಮುಂತಾದ ಸೌಲಭ್ಯಗಳನ್ನು ಒದಗಿಸಲಾಗಿದೆ.
 • ಸಂಜೆ ಹೊರ ರೋಗಿಗಳ ಸೇವೆ: ಬಡ ಕೂಲಿ ಕಾರ್ಮಿಕರ ಮತ್ತು ಕೆಳ ಮಧ್ಯಮ ವರ್ಗದವರ ಹಾಗೂ ಕೊಳಗೇರಿ ನಿವಾಸಿಗಳ ಅನುಕೂಲಕ್ಕಾಗಿ ಪ್ರತಿ ಪ್ರಾಥಮಿಕಆರೋಗ್ಯಕೇಂದ್ರದಲ್ಲಿ ಸಂಜೆ 5 ರಿಂದ 8 ರವರೆಗೆತಜ್ಞ ವೈದ್ಯರುಗಳ ಸೇವೆಯನ್ನುಒದಗಿಸಲಾಗುತ್ತದೆ. ಇದರಲ್ಲಿ ಫಿಸಿಶಿಯನ್, ಶಸ್ತ್ರಚಿಕಿತ್ಸಕರು, ಸ್ತ್ರೀ ರೋಗತಜ್ಞರು, ಮಕ್ಕಳ ತಜ್ಞರು ಮುಂತಾದ ತಜ್ಞ ವೈದ್ಯರುಗಳು ಈ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುತ್ತಿದ್ದಾರೆ. ತಜ್ಞ ವೈದ್ಯರ ಈ ಸಂಜೆ ಹೊರ ರೋಗಿಗಳ ವಿಭಾಗವು ಬೆಂಗಳೂರು ನಗರದಲ್ಲಿ ಮಾತ್ರವಲ್ಲದೆ ರಾಜ್ಯದ ಇತರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಅನುಷ್ಠಾನಗೊಳ್ಳುತ್ತಿದ್ದು ಜನಪ್ರಿಯಕಾರ್ಯಕ್ರಮವಾಗಿದೆ.
 1. ಟ್ರಾನ್ಸಿಟ್‌ಕ್ಲಿನಿಕ್: ಬೆಂಗಳೂರು ನಗರಕೇಂದ್ರ ಪ್ರದೇಶದ, ಅತ್ಯಂತಜನ ನಿಬಿಡ ಸ್ಥಳಗಳಾದ ಕೆಂಪೇಗೌಡ ಬಸ್ ನಿಲ್ದಾಣ ಮತ್ತು ಯಶವಂತಪುರ ಬಸ್ ನಿಲ್ದಾಣಗಳಲ್ಲಿ, ಸಾರ್ವಜನಿಕರ, ಪ್ರಯಾಣಿಕರ, ಸಾರಿಗೆ ಸಿಬ್ಬಂದಿಯ, ಸುತ್ತಾ ಮುತ್ತ್ತ ವಾಸಿಸುವ ಕಾಲುದಾರಿ ನಿವಾಸಿಗಳ ಮತ್ತು ನಿರ್ಗತಿಕರಿಗೆ ಪ್ರಾಥಮಿಕ ಹಂತದ ವೈದ್ಯಕೀಯ ಸಂರಕ್ಷಣಾ ಸೇವೆಯನ್ನು ಒದಗಿಸಲು ಎರಡು ಟ್ರಾನ್ಸಿಟ್ ಕ್ಲಿನಿಕ್‌ಗಳನ್ನು ಪ್ರಾರಂಭಿಸಲಾಗಿರುತ್ತದೆ. ಸದರಿ ಕ್ಲಿನಿಕ್‌ಗಳಲ್ಲಿ ಉಚಿತ ಪ್ರಯೋಗಶಾಲಾ ಪರೀಕ್ಷೆ, ಚಿಕಿತ್ಸೆ ಮತ್ತು ಔಷಧೋಪಚಾರವನ್ನು ನೀಡಲಾಗುತ್ತಿದೆ.
 2. 5. ಸಂಚಾರಿ ಆರೋಗ್ಯ ಘಟಕಗಳು: ಸ್ಥಾನಿಕ ಸೇವಾ ಕೇಂದ್ರಗಳಿಗೆ ಸನಿಹದಲ್ಲಿರದ ಕೊಳಗೇರಿ ನಿವಾಸಿಗಳ ಆರೋಗ್ಯ ಸೌಲಭ್ಯಕ್ಕಾಗಿ ಬೆಂಗಳೂರು ನಗರದಲ್ಲಿ 6, ಮೈಸೂರಿನಲ್ಲಿ 1 ಮತ್ತು ಮಂಗಳೂರು ನಗರದಲ್ಲಿ 1 ಒಟ್ಟು 8 ಸುಸಜ್ಜಿತ ಸಂಚಾರಿ ಆರೋಗ್ಯ ಘಟಕಗಳು ಸಮುದಾಯದ ಸನಿಹದಲ್ಲಿ ಗುಣಾತ್ಮಕ ಉಚಿತ ಪ್ರಾಥಮಿಕ ಹಂತದ ಆರೋಗ್ಯ ಸಂರಕ್ಷಣೆ ಸೇವೆಯನ್ನು ನೀಡುತ್ತಿವೆ.
 3. ಕಿರಿಯ ಮಹಿಳಾ ಆರೋಗ್ಯ ಸಹಾಯಕಿಕಿಯೋಸ್ಕ್: ಸಮುದಾಯಕ್ಕೆ ಸನಿಹದಲ್ಲಿ ಮನೆ ಬಾಗಿಲ ಮುಂದೆ ಸಮಗ್ರ ತಾಯಿ ಮಕ್ಕಳ ಆರೋಗ್ಯ ಸೇವೆಯನ್ನು ನೀಡುವುದಕ್ಕಾಗಿ ಬೆಂಗಳೂರು ನಗರದಲ್ಲಿ 25, ಮೈಸೂರು ನಗರದಲ್ಲಿ 5, ಮಂಗಳೂರು ನಗರದಲ್ಲಿ 5, ಉಲ್ಲಾಳ ಪಟ್ಟಣದಲ್ಲಿ 4 ಕಿಯೋಸ್ಕ್ಗಳನ್ನು ಅಂದರೆ ಒಟ್ಟು 39 ಕಿಯೋಸ್ಕ್ಗಳು ಕಾರ್ಯನಿರ್ವಹಿಸುತ್ತಿವೆ.

7 ಅ) ಸಮುದಾಯಿಕರಣ: ಸಮುದಾಯಿಕರಣದ ಭಾಗವಾಗಿಎಲ್ಲಾ ನಗರಆರೋಗ್ಯ ಕೇಂದ್ರಗಳಲ್ಲೂ ಚುನಾಯಿತ ನಗರ ಪಾಲಿಕೆ / ನಗರ ಸಭಾ ಸದಸ್ಯರ ಅಧ್ಯಕ್ಷತೆಯಲ್ಲಿ ಆರೋಗ್ಯ ರಕ್ಷಾ ಸಮಿತಿಗಳನ್ನು ರಚಿಸಲಾಗಿದ್ದು, ಸ್ಥಳೀಯ ಆರೋಗ್ಯ ಸಂಬಂಧಿ ಕಾರ್ಯಕ್ರಮಗಳಿಗಾಗಿ ಮತ್ತು ಸಾಂಸ್ಥಿಕ ಅಭಿವೃದ್ದಿಗಳಿಗಾಗಿ ವಾರ್ಷಿಕ ರೂ.1.75 ಲಕ್ಷಗಳ ಅನುದಾನವನ್ನು ಮುಕ್ತ ನಿಧಿಯನ್ನಾಗಿ ಒದಗಿಸಲಾಗುತ್ತ್ತಿದೆ.

7 ಬ) ಆಶಾ: ಕೊಳಗೇರಿಗಳ ಪ್ರತಿ 1500 ರಿಂದ 2000 ಜನಸಂಖ್ಯೆಗೆ ಸಮುದಾಯ ಆಯ್ಕೆ ಮಾಡಿದ ಒಬ್ಬ ಆಶಾ ಕಾರ್ಯಕರ್ತೆಯನ್ನು ತರಬೇತಿಗೊಳಿಸಿ ಆರೋಗ್ಯ ರಕ್ಷಾ ಸಮಿತಿಯಿಂದ ನೇಮಕ ಮಾಡಲಾಗಿರುತ್ತದೆ. ಆಶಾ ಕಾರ್ಯಕರ್ತೆಯರು ಇಲಾಖೆ ಮತ್ತು ಸಮುದಾಯದ ಮಧ್ಯೆ ಸೇವಾ ವಿಸ್ತರಣೆ ದೃಷ್ಟಿಯಿಂದ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

 1. ಸ) ಮಹಿಳಾ ಆರೋಗ್ಯ ಸಮಿತಿ: ಪ್ರತಿ ಕೊಳಗೇರಿ 50-100 ಕುಟುಂಬಗಳಿಗೆ ಒಂದರಂತೆ, 10-12 ಸದಸ್ಯರ ಮಹಿಳಾ ಆರೋಗ್ಯ ಸಮಿತಿಗಳನ್ನು ರಚಿಸಿ, ಒಂದು ದಿನದ ತರಬೇತಿ ನೀಡಿ ತಾಯಿ ಮಕ್ಕಳ ಆರೋಗ್ಯ ಸೇವೆ ಮತ್ತು ನೆರೆಹೊರೆಯ ನೈರ್ಮಲ್ಯ ಕಾರ್ಯಕ್ರಮಕ್ಕಾಗಿ ಅಣಿಗೊಳಿಸಲಾಗಿರುತ್ತದೆ ಮತ್ತು ಅವರಿಗೆ ವಾರ್ಷಿಕ ರೂ.5000/- ಗಳ ಮುಕ್ತ ನಿಧಿಯನ್ನು ಸ್ಥಾಯಿ ಚಟುವಟಿಕೆಗಳಿಗಾಗಿ ನೀಡಲಾಗಿರುತ್ತದೆ.
 2. ರೆಫರಲ್ ಆಸ್ಪತ್ರೆ / ಸಮುದಾಯ ಆರೋಗ್ಯ ಕೇಂದ್ರಗಳು: ಬಿ.ಬಿ.ಎಂ.ಪಿ. ಕೇಂದ್ರ ಪ್ರದೇಶದಲ್ಲಿರುವ 6 ರೆಫರಲ್ ಆಸ್ಪತ್ರೆಗಳಿಗೆ ಹೆಚ್ಚುವರಿಯಾಗಿ ತಜ್ಞ ವೈದ್ಯರುಗಳನ್ನು ಒದಗಿಸಲಾಗಿರುತ್ತದೆ (ಫಿಸಿಷಿಯನ್, ಅರೆವಳಿಕೆ ತಜ್ಞರು, ಮಕ್ಕಳ ತಜ್ಞರು, ಸ್ರ್ತೀ ರೋಗತಜ್ಞರು, ದಂತ ವೈದ್ಯರು ಇತ್ಯಾದಿ, ಕೊರತೆಯ ವಿಶ್ಲೇಷಣೆ ನಂತರ). ಹಬ್ ಅಂಡ್ ಸ್ಪೋಕ್ ಮಾದರಿಯಲ್ಲಿ ಉನ್ನತ ತಂತ್ರಜ್ಞಾನದ 6 ಪ್ರಯೋಗ ಶಾಲೆಗಳನ್ನು ಈ 6 ರೆಫರಲ್ ಆಸ್ಪತ್ರೆಗಳಲ್ಲೂ ಸ್ಥಾಪಿಸಲಾಗಿದೆ.
 3. ವಿಶೇಷ ನವಜಾತ ಶಿಶು ಆರೈಕೆ ಘಟಕ: ಜೆ.ಸಿ.ರೋಡ್ ಬಳಿಯಿರುವ ಸಿದ್ದಯ್ಯ ರೆಫರಲ್ ಆಸ್ಪತ್ರೆಯಲ್ಲಿ ವಿಶೇಷ ನವಜಾತ ಶಿಶು ಆರೈಕೆ ಘಟಕವನ್ನು ಹೆಚ್ಚುವರಿ ಮಾನವ ಸಂಪನ್ಮೂಲ ಮತ್ತು ಉಪಕರಣಗಳೊಂದಿಗೆ ಸ್ಥಾಪಿಸಲಾಗಿರುತ್ತದೆ.

ನಗರ ಆರೋಗ್ಯ ಅಭಿಯಾನ ಅನುಷ್ಠಾನಗೊಳ್ಳುತ್ತಿರುವ ಚಾಲ್ತಿ ಪಟ್ಟಿ

ಕ್ರ.ಸಂ.

ನಗರ / ಪಟ್ಟಣ

ಕ್ರ.ಸಂ.

ನಗರ / ಪಟ್ಟಣ

 

ಕ್ರ.ಸಂ.

ನಗರ / ಪಟ್ಟಣ

ಕ್ರ.ಸಂ.

ನಗರ / ಪಟ್ಟಣ

1

ಬಾಗಲಕೋಟೆ

21

ಚಿಂತಾಮಣಿ   

41

ವಾಡಿ

61

ರಾಯಚೂರು

2

ಜಮಖಂಡಿ     

22

ಗೌರಿಬಿದನೂರು       

42

ಹಾಸನ

62

ಸಿಂಧನೂರು

3

ರಬಕವಿ ಬನಹಟ್ಟಿ

23

ಶಿಡ್ಲಘಟ್ಟ

43

ಅರಿಸಿಕೆರೆ

63

ರಾಮನಗರ

4

ಮುದೋಳ್

24

ಚಿಕ್ಕಬಳ್ಳಾಪುರ 

44

ಹಾವೇರಿ

64

ಚನ್ನಪಟ್ಟಣ

5

ಇಳಕಲ್

25

ಚಿತ್ರದುರ್ಗ

45

ರಾಣಿಬೆನ್ನೂರು

65

ಕನಕಪುರ

6

ತೇರದಾಳ್

26

ಚಳ್ಳಕೆರೆ  

46

ಸವಣೂರು

66

ಶಿವಮೊಗ್ಗ

7

ದೊಡ್ಡಬಳ್ಳಾಪುರ 

27

ಹಿರಿಯೂರು                                                                        

47

ಮಡಿಕೇರಿ

67

ಭದ್ರಾವತಿ

8

ಹೊಸಕೋಟೆ   

28

ಮಂಗಳೂರು   

48

ಕೋಲಾರ

68

ಸಾಗರ

9

ಬೆಳಗಾವಿ  

29

ಪುತ್ತೂರು      

49

ಬಂಗಾರಪೇಟೆ

69

ಶಿಕಾರಿಪುರ

10

ಗೋಕಾಕ್  

30

ಬಂಟ್ವಾಳ     

50

ಮುಳಬಾಗಿಲು

70

ತುಮಕೂರು

11

ನಿಪ್ಪಾಣ        

31

ಉಳ್ಳಾಲ

51

ರಾಬರ್ಟ್ಸನ್‌ಪೇಟೆ

71

ತಿಪಟೂರು

12

ಸಿರಗುಪ್ಪ       

32

ದಾವಣಗೆರೆ

52

ಗಂಗಾವತಿ

72

ಶಿರಾ

13

ಹೊಸಪೇಟೆ 

33

ಹರಿಹರ

53

ಕೊಪ್ಪಳ

73

ಉಡುಪಿ

14

ಬಳ್ಳಾರಿ

34

ಹರಪನಹಳ್ಳಿ

54

ಮಂಡ್ಯ

74

ಯಾದಗಿರಿ

15

ಬಿದರ್

35

ಧಾರವಾಡ

55

ಮೈಸೂರು

75

ಸುರಪುರ

16

ಬಸವಕಲ್ಯಾಣ

36

ಗದಗ

56

ನಂಜನಗೂಡು

76

ಶಹಪುರ

17

ಬಿಜಾಪುರ

37

ಕಲಬುರಗಿ

57

ಹುಣಸೂರು

77

ಬೆಂಗಳೂರು ನಗರ

18

ಚಾಮರಾಜನಗರ   

38

ಸೇಡಂ

58

ಕಾರವಾರ

78

ಬಿಬಿಎಂಪಿ

19

ಕೊಳ್ಳೇಗಾಲ            

39

ಶಹಬಾದ್

59

ಶಿರಸಿ

79

ಅಳಂದ

20

ಚಿಕ್ಕಮಗಳೂರು                                                                

40

ಚಿತ್ತಾಪುರ

60

ದಾಂಡೇಲಿ

80

ಶಿಕಾರಿಪುರ

ಇತ್ತೀಚಿನ ನವೀಕರಣ​ : 17-11-2023 01:08 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ರಾಷ್ಟ್ರೀಯ ಆರೋಗ್ಯ ಅಭಿಯಾನ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080