ಅಭಿಪ್ರಾಯ / ಸಲಹೆಗಳು

ಪೀಠಿಕೆ ಮತ್ತು ಆದೇಶಗಳು

1952 ರಲ್ಲಿ ಕುಟುಂಬ ಯೋಜನೆ ರಾಷ್ಟ್ರೀಯ ಕಾರ್ಯಕ್ರಮ ಆರಂಭಿಸಿದ ವಿಶ್ವದ ಮೊದಲ ದೇಶ ಭಾರತ. ದಶಕಗಳಿಂದ ಈ ಕಾರ್ಯಕ್ರಮವು ನೀತಿ ಮತ್ತು ವಾಸ್ತವಿಕ ಕಾರ್ಯಕ್ರಮ ಅನುಷ್ಠಾನದ ಪರಿಭಾಷೆಯಲ್ಲಿ ಪರಿವರ್ತನೆಯನ್ನು ಹೊಂದಿದೆ ಮತ್ತು ಪ್ರಸ್ತುತ ಜನಸಂಖ್ಯಾ ಸ್ಥಿರೀಕರಣ ಗುರಿಗಳನ್ನು ಸಾಧಿಸುವುದು ಮಾತ್ರವಲ್ಲದೆ, ಸಂತಾನೋತ್ಪತ್ತಿ ಆರೋಗ್ಯವನ್ನು ಉತ್ತೇಜಿಸಲು ಹಾಗೂ ತಾಯಿ ಮರಣ ಮತ್ತು ಶಿಶು ಮರಣ ಕಡಿಮೆ ಮಾಡಲು ಪುನರ್ ನಿರೂಪಿಸಲಾಗುತ್ತಿದೆ. ರಾಷ್ಟ್ರೀಯ ಜನಾಸಂಖ್ಯಾ ನೀತಿ 2000, ರಾಷ್ಟ್ರೀಯ ಆರೋಗ್ಯ ನೀತಿ 2017 ಮತ್ತು ರಾಷ್ಟ್ರೀಯ ಆರೋಗ್ಯ ಅಭಿಯಾನದಂತಹ ವಿವಿಧ ನೀತಿ ದಾಖಲೆಗಳಲ್ಲಿ ಹೇಳಲಾದ ಕುಟುಂಬ ಕಲ್ಯಾಣ ಕಾರ್ಯಕ್ರಮದ ದಸ್ತಾವೇಜುಗಳು ಮತ್ತು ಉದ್ದೇಶಗಳನ್ನು ಸಾಧಿಸುವುದು.

 

ಉದ್ದೇಶಗಳು:-

 • ಸಂತಾನೋತ್ಪತ್ತಿ ಆರೋಗ್ಯವನ್ನು ಉತ್ತೇಜಿಸಲು ಹಾಗೂ ತಾಯಿ ಮರಣ ಮತ್ತು ಶಿಶು ಮರಣ ಕಡಿಮೆ ಮಾಡಲು ಪುನರ್ ನಿರೂಪಿಸಲಾಗುತ್ತಿದೆ.
 • ಅರ್ಹ ದಂಪತಿಗಳಿಗೆ ಕುಟುಂಬ ಯೋಜನಾ ಸೇವೆಗಳನ್ನು ಪೂರೈಸುವುದು ಮತ್ತು ಸ್ವಯಂ ಪ್ರೇರಿತ ಕುಟುಂಬ ಯೋಜನಾ ಸೇವೆಗಳನ್ನು ಪೂರೈಕೆಗಳು ಮತ್ತು ಮಾಹಿತಿಗಳ ಸುಧಾರಿತ ಪ್ರವೇಶದಿಂದ ಅಸಂಯೋಜಿತ ಅವಶ್ಯಕತೆಯನ್ನು ಕಡಿಮೆಗೊಳಿಸುವುದು.
 • ಗರ್ಭನಿರೋಧಕ ಬಳಕೆಗಳನ್ನು ಪೂರೈಸುವುದು.

 

ಗುರಿಗಳು:-

 • ಕುಟುಂಬ ಯೋಜನೆಯ ಮಾಹಿತಿ ಮತ್ತು ಶಿಕ್ಷಣ ಸೇರಿದಂತೆ ಲೈಂಗಿಕ ಮತ್ತು ಸಂತಾನೋತ್ಪತ್ತಿ ಆರೋಗ್ಯ-ಆರೈಕೆ ಸೇವೆಗಳಿಗೆ ಸಾರ್ವತ್ರಿಕ ಪ್ರವೇಶವನ್ನು ಖಚಿತಪಡಿಸಿಕೊಳ್ಳುವುದು.
 • ಒಟ್ಟು ಫಲವತತ್ತೆ ದರವನ್ನು ರಾಷ್ಟ್ರೀಯ ಕೌಟುಂಬಿಕ ಆರೋಗ್ಯ ಸಮೀಕ್ಷೆ < 1.7 ಕ್ಕೆ ಕಡಿಮೆಗೊಳಿಸುವುದು.
 • ಕುಟುಂಬ ಯೋಜನೆಯನ್ನು ವಿಸ್ತರಿಸುವುದು ಮತ್ತು ಲಭ್ಯವಿರುವ ಪ್ರಸ್ತುತ ವಿಧಾನಗಳ ಬಳಕೆಯನ್ನು ಹೆಚ್ಚು ಮಾಡುವುದು ಮತ್ತು ಗರ್ಭನಿರೋಧಕಗಳ (ಚುಚ್ಚುಮದ್ದು ಅಂತರ ಮತ್ತು ಛಾಯಾ) ಬಳಕೆಯನ್ನು ಪ್ರೇರೇಪಿಸುವುದು.
 • ತಾತ್ಕಾಲಿಕ ವಿಧಾನಗಳ ಮೇಲೆ ಗಮನವನ್ನು ಹೆಚ್ಚಿಸುವ ಮೂಲಕ ಆರೋಗ್ಯಕರ ಜನನ ಅಂತರವನ್ನು ಖಚಿತಪಡಿಸಿಕೊಳ್ಳುವುದು.
 • ಗುಣಮಟ್ಟದ ಸೇವೆಗಳ ವಿತರಣೆ ಮತ್ತು ಬೇಡಿಕೆ ಉತ್ಪಾದನೆಯ ಮೂಲಕ ಸಂತಾನ ನಿರೋಧ ಶಸ್ತ್ರಚಿಕಿತ್ಸೆಯ ಸೇವೆಗಳನ್ನು ಬಲಪಡಿಸುವುದು.
 • ಕುಟುಂಬ ಯೋಜನೆ ದಾಸ್ತಾನುಗಳ ಪೂರೈಕೆಯನ್ನು ಬಲಪಡಿಸುವುದು.

 

 ಕುಟುಂಬ ಕಲ್ಯಾಣ ಕರ‍್ಯಕ್ರಮದ ಲಭ್ಯವಿರುವ ವಿವಿಧ ಸೇವೆಗಳು:

 • ಶಸ್ತ್ರಚಿಕಿತ್ಸಾ ಮತ್ತು ಕಾಪರ್-ಟಿ ಅಳವಡಿಕೆಯ ನಿಗದಿತ ದಿನಗಳ ಸೇವೆಗಳು.
 • ನೂತನ ಗರ್ಭನಿರೋದಕ ಸೇವೆಗಳು ಮತ್ತು ಸರಬರಾಜು (ಅಂತರ ಚುಚ್ಚು ಮದ್ದು, ಛಾಯ ನುಂಗುವ

 ಗುಳಿಗೆಗಳು)

 • ಹೆರಿಗೆಯ ನಂತರದ /ಗರ್ಭಪಾತದ ನಂತರದ ಕುಟುಂಬ ಯೋಜನೆಯಸೇವೆಗಳು( ಪಿ.ಪಿ.ಐ.ಯು.ಸಿ.ಡಿ, ಪಿ.ಎ.ಐ.ಯು.ಸಿ.ಡಿ, ಗರ್ಭನಿರೋದಕಗಳ ವಿತರಣೆ.
 • ಮನೆಬಾಗಿಲಿಗೆ ಗರ್ಭನಿರೋದಕಗಳ ವಿತರಣಾ ಯೋಜನೆ: ನಿರೋದ್, ಮಾಲಾ-ಎನ್,ಛಾಯಾ, ತುರ್ತುಗರ್ಭನಿರೋದಕ ನುಂಗುವು ಗುಳಿಗೆ).
 • ಎಫ್.ಪಿ.ಎಲ್.ಎಮ್.ಐ.ಎಸ್. ತಂತ್ರಾಂಶದ ಬಳಕೆ.
 • ವಿಶ್ವ ಜನಸಂಖ್ಯಾ ದಿನಾಚರಣೆಯ ಪಾಕ್ಷಿಕ ಮತ್ತು ವ್ಯಾಸೆಕ್ಟಮಿ ಪಾಕ್ಷಿಕ.
 • ಕುಟುಂಬ ಕಲ್ಯಾಣ ಕಾರ್ಯಕ್ರಮದಲ್ಲಿ ಪರಿಹಾರಧನ ನೀಡುವ ಯೋಜನೆ.
 • ಫಲಾನುಭವಿಗಳಿಗೆ ಪ್ರೋತ್ಸಾಹ ಧನ
 • ಕುಟುಂಬ ಯೋಜನೆಗಳ ತರಬೇತಿ.

 

ಕುಟುಂಬ ಯೋಜನೆ ವಿಧಾನಗಳು:

 

 1. ಶಾಶ್ವತ ವಿಧಾನಗಳು:
 • ಸ್ತ್ರೀ ಸಂತಾನ ನಿರೋಧ ಶಸ್ತ್ರಚಿಕಿತ್ಸೆಗಳು: ಹೆರಿಗೆಯ ತಕ್ಷಣ, ಮಧ್ಯಾಂತರ, ಲ್ಯಾಪ್ರೋಸ್ಕೋಪಿಕ್
 • ಪುರುಷ ಸಂತಾನ ನಿರೋಧ ಶಸ್ತ್ರಚಿಕಿತ್ಸೆಗಳು: ಹೋಲಿಗೆ ರಹಿತ ಶಸ್ತ್ರಚಿಕಿತ್ಸೆ
 1. ತಾತ್ಕಲಿಕ ವಿಧಾನಗಳು:

 

 • ನುಂಗುವ ಗುಳಿಗೆಗಳು:

ಅ. ಮಾಲಾ-ಎನ್: ಪ್ರತಿ ದಿನ ರಾತ್ರಿ ಒಂದು ಗುಳಿಗೆ.

ಆ. ಛಾಯಾ: (ನೂತನ ಗರ್ಭನಿರೋಧಕ) ವಾರಕ್ಕೆರಡು ಬಾರಿ ಮೊದಲ ಮೂರು ತಿಂಗಳು

 ವಾರಕ್ಕೆ ಒಂದು ಬಾರಿ ತದನಂತರ

ಇ. ತುರ್ತು ಗರ್ಭ ನಿರೋಧಕ ಗುಳಿಗೆಗಳು: ತುರ್ತು ಸಂದರ್ಭದಲ್ಲಿ ಇತರೆ ಗರ್ಭನಿರೋಧಕಗಳ ಬಳಕೆ ತಪ್ಪಿದಾಗ

 • ಕಾಪರ್-ಟಿ: ಮಧ್ಯಂತರ ವಂಕಿ ಅಳವಡಿಕೆ.

 ಪ್ರಸವ ನಂತರ ವಂಕಿ ಅಳವಡಿಕೆ.

 • ನಿರೋಧ್
 • ಅಂತರ ಚುಚ್ಚು ಮದ್ದು: (ನೂತನ ಗರ್ಭನಿರೋಧಕ) ಮೂರು ತಿಂಗಳಿಗೊಮ್ಮೆ

  

 ವಿವಿಧ ಕುಟುಂಬ ಯೋಜನೆಗಳು / ಸೌಲಭ್ಯಗಳು:

 

 • ಗರ್ಭನಿರೋಧಕಗಳನ್ನು ಮನೆ ಬಾಗಿಲಿಗೆ ತಲುಪಿಸುವ ಯೋಜನೆ (HDC):- ಫಲಾನುಭವಿಗಳ ಮನೆ ಬಾಗಿಲಿಗೆ ಗರ್ಭನಿರೋಧಕಗಳನ್ನು ತಲುಪಿಸುವ ಉದ್ದೇಶದಿಂದ ಆಶಾ ಕಾರ್ಯಕರ್ತೆಯರ ಸೇವೆಯನ್ನು ಬಳಸಿಕೊಳ್ಳಲು ಈ ಯೋಜನೆ ಆರಂಭಿಸಲಾಗಿದೆ.
 • ಜನನದ ನಡುವಿನ ಅಂತರ (Ensuring Spacing at birth):- ಮೊದಲನೆ ಮತ್ತು 2ನೆಯ ಮಗುವಿನ ನಡುವೆ ಅಂತರವನ್ನು ಕಾಪಡಿಕೊಳ್ಳಲು ಆಶಾ ಕಾರ್ಯಕರ್ತೆಯರು ಮತ್ತು ಆಪ್ತ ಸಮಲೋಚಕರೊಂದಿಗೆ ಅರ್ಹ ದಂಪತಿಗಳಿಗೆ ಸೂಕ್ತ ಸಮಲೋಚನೆ ನಡೆಸುವುದು.

 

 • ಕುಟುಂಬ ಕಲ್ಯಾಣ ಕಾರ್ಯಕ್ರಮದಲ್ಲಿ ಪರಿಹಾರಧನ ನೀಡುವ ಯೋಜನೆ (FPIS):- ಶಸ್ತ್ರಚಿಕಿತ್ಸೆ ಸಮಯದಲ್ಲಿ ಫಲಾನುಭವಿಗೆ ವಿಫಲ/ತೊಂದರೆ/ಮರಣ ಸಂಭವಿಸಿದರೆ ಈ ಕೆಳಕಂಡAತೆ ಪರಿಹಾರಧನ ನೀಡಲಾಗುವುದು.
 1. ವಿಫಲ:- ರೂ. 60,000
 2. ತೊಂದರೆ:- ರೂ.50,000 (ಗರಿಷ್ಟ)
 3. ಮರಣ:- ರೂ. 4,00,000

 ಕುಟುಂಬ ಕಲ್ಯಾಣ ಕಾರ್ಯಕ್ರಮದ ಅಡಿಯಲ್ಲಿ FPIS ಯೋಜನೆಯ ಪರಿಹಾರವನ್ನು ದ್ವಿಗುಣಗೊಳಿಸುವ ಸರ್ಕಾರದ ಆದೇಶ

 • ಫಲಾನುಭವಿಗಳಿಗೆ ಪ್ರೋತ್ಸಾಹ ಧನ:-

- ಮಹಿಳಾ ಸಂತಾನ ನಿರೋಧ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರೆ:

 ಎ.ಪಿ.ಎಲ್ ಕೇಸ್ ರೂ. 250,

 ಬಿ.ಪಿ.ಎಲ್/ ಎಸ್.ಸಿ / ಎಸ್.ಟಿ. ಕೇಸ್ ರೂ. 600,

 

- ಪುರುಷ ಸಂತಾನ ನಿರೋಧ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರೆ: ರೂ. 1100

- ಪಿ.ಪಿ.ಐ.ಯು.ಸಿ.ಡಿ ಮತ್ತು ಪಿ.ಎ.ಐ.ಯು.ಸಿ.ಡಿ ಅಳವಡಿಸಿಕೊಂಡಿರುವ ಫಲಾನುಭವಿಗಳಿಗೆ ತಲಾ ರೂ. 300 ರಂತೆ ಪ್ರೋತ್ಸಾಹ ಧನವನ್ನು ನೀಡಲಾಗುವುದು.

- ಅಂತರ ಚುಚ್ಚುಮದ್ದು ಹಾಕಿಸಿಕೊಳ್ಳುವ ಫಲಾನುಭವಿಗಳಿಗೆ ರೂ. 100 ರಂತೆ ಪ್ರೋತ್ಸಾಹ ಧನವನ್ನು ನೀಡಲಾಗುವುದು.

 

 

ಇತ್ತೀಚಿನ ನವೀಕರಣ​ : 06-12-2023 03:25 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ರಾಷ್ಟ್ರೀಯ ಆರೋಗ್ಯ ಅಭಿಯಾನ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080