ಅಭಿಪ್ರಾಯ / ಸಲಹೆಗಳು

ರಾಷ್ಟ್ರೀಯ ಶ್ರವಣದೋಷ ನಿಯಂತ್ರಣ ಮತ್ತು ನಿವಾರಣಾ ಕಾರ್ಯಕ್ರಮ (ಎನ್ ಪಿ ಪಿ ಸಿ ಡಿ)

ರಾಷ್ರೀಯ ಶ್ರವಣದೋಷ ನಿಯಂತ್ರಣ ಮತ್ತು ನಿವಾರಣಾ ಕಾರ್ಯಕ್ರಮ.

 

ಪೀಠಿಕೆ:

ಭಾರತದಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಅಂದಾಜಿನ ಪ್ರಕಾರ, ಸುಮಾರು 63 ಮಿಲಿಯನ್ ಜನರು ಗಮನಾರ್ಹ ಶ್ರವಣೇಂದ್ರಿಯ ದುರ್ಬಲತೆಯಿಂದ ಬಳಲುತ್ತಿದ್ದಾರೆ. ಇದರಂತೆ ಭಾರತೀಯ ಜನಸಂಖ್ಯೆಯಲ್ಲಿ ಅಂದಾಜು ಶೇಕಡ 6.3% ರಷ್ಟು ಪ್ರಮಾಣದಲ್ಲಿದೆ.

 

ಹಿನ್ನಲೆ:

ಎನ್.ಎಸ್.ಎಸ್.ಓ. ಸಮೀಕ್ಷೆ 2001ರ ಪ್ರಕಾರ, ಪ್ರಸ್ತುತ ತೀವ್ರವಾದ ಕಿವುಡುತನದ ನಷ್ಟದಿಂದ ಬಳಲುತ್ತಿರುವ ಸಂಖ್ಯೆ ಒಂದು ಲಕ್ಷಜನ ಸಂಖ್ಯೆಗೆ 291 ವ್ಯಕ್ತಿಗಳು. ಇದರಲ್ಲಿ 0 ರಿಂದ 14 ವರ್ಷಗಳ ನಡುವಿನ ವಯಸ್ಸಿನ ಮಕ್ಕಳಲ್ಲಿ ಹೆಚ್ಚು ಶೇಕಡಾವಾರು ಕಂಡು ಬಂದಿದೆ.

 

ಕರ್ನಾಟಕ ರಾಜ್ಯದಲ್ಲಿ 2018ರ ಅಂದಾಜು ಜನಗಣತಿಗೆ 0-6 ವರ್ಷದ ಮಕ್ಕಳಲ್ಲಿ 20,839 ಮಕ್ಕಳು ಶ್ರವಣದೋಷದಿಂದ ಬಳಲುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ. ಇವುಗಳಲ್ಲಿ ಹೆಚ್ಚಿನ ಕಿವುಡುತನವು ಹುಟ್ಟಿನಿಂದ ಬಂದಂತಹುಗಳಾಗಿರುತ್ತವೆ.

(ಮೂಲ: ಜಿಲ್ಲಾ ಮಟ್ಟದ ಎನ್.ಪಿ.ಪಿ.ಸಿ.ಡಿ. ಕಾರ್ಯಕ್ರಮದ ವರದಿ).

 

ದೀರ್ಘಕಾಲದ ಉದ್ದೇಶ:

ಶ್ರವಣದೋಷ ಮತ್ತು ಕಿವುಡುತನದ ಪ್ರಮುಖ ಕಾರಣಗಳನ್ನುತಡೆಗಟ್ಟಲು ಮತ್ತು ನಿಯಂತ್ರಿಸಿ, ಅಸ್ತಿತ್ವದಲ್ಲಿರುವ ಕಿವುಡುತನದ ಪ್ರಮಾಣದ ಹೊರೆಯನ್ನುಶೇಖಡ 25ರಷ್ಟು ಇಳಿಸುವುದು.

ಉದ್ದೇಶ:

 • ಗಾಯ ಅಥವಾ ರೋಗದಿಂದ ಉಂಟಾಗುವ ಕಿವುಡುತನವನ್ನು ತಡೆಗಟ್ಟುವಿಕೆ.
 • ಕಿವುಡುತನವನ್ನು ಆರಂಭದಲ್ಲಿಯೇ ಗುರುತಿಸಿ, ಪರೀಕ್ಷಿಸಿ, ಚಿಕಿತ್ಸೆಕೊಡುವುದು.
 • ಎಲ್ಲಾ ವಯೋಮಾನದವರ ವೈದ್ಯಕೀಯ / ಶಸ್ತಚಿಕಿತ್ಸಾ ಪುನರ್ವಸತಿ.
 • ಕಿವುಡುತನ ಮತ್ತುತಡೆಗಟ್ಟುವ ವಿಧಾನಗಳ ಬಗ್ಗೆ ಅರಿವು ಮೂಡಿಸುವಿಕೆ.
 • ಭಾಷಾ ಚಿಕಿತ್ಸೆಗೆ ರೋಗಿಗಳನ್ನು ತಜ್ಞ ವೈದ್ಯರಿಗೆ ಉಲ್ಲೇಖಿಸುವುದು.

ತಂತ್ರಗಳು:

 • ಕಿವಿ ಆರೈಕೆಗಾಗಿ ಸೇವಾ ವಿತರಣೆಯನ್ನು ಬಲಪಡಿಸುವುದು.
 • ಕಿವಿ ಆರೈಕೆ ಸೇವೆಗಳಿಗಾಗಿ ಮಾನವ ಸಂಪನ್ಮೂಲವನ್ನು ಅಭಿವೃದ್ಧಿಪಡಿಸುವುದು.
 • ಕಿವುಡುತನವನ್ನು ತಡೆಗಟ್ಟುವಲ್ಲಿ ವಿಶೇಷ ಒತ್ತು ನೀಡಿ ಸೂಕ್ತ ಮತ್ತು ಪರಿಣಾಮಕಾರಿ ಐಇಸಿ ಚಟುವಟಿಕೆಗಳ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು. 
 • ಕಾರ್ಯಕ್ರಮದಡಿ ಆಯ್ಕೆಯಾದ ಜಿಲ್ಲಾ ಆಸ್ಪತ್ರೆಗಳು, ಸಮುದಾಯ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಾಂಸ್ಥಿಕ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸುವುದು.

 ಕಾರ್ಯಕ್ರಮದ ಘಟಕಗಳು:

 • ಮಾನವಸಂಪನ್ಮೂಲ ತರಬೇತಿ ಮತ್ತು ಅಭಿವೃದ್ಧಿ - ಶ್ರವಣದೋಷ ಮತ್ತು ಕಿವುಡುತನದ ಪ್ರಕರಣಗಳ ತಡೆಗಟ್ಟುವಿಕೆ, ಆರಂಭಿಕ ಗುರುತಿಸುವಿಕೆ ಮತ್ತು ನಿರ್ವಹಣೆಗಾಗಿ, ವೈದ್ಯಕೀಯ ಕಾಲೇಜು ಮಟ್ಟದ ತಜ್ಞರಿಂದ ಇಎನ್‌ಟಿ ಮತ್ತು ಆಡಿಯೋಲಾಜಿ ತಂಡದವರಿಗೆ ತರಬೇತಿ ನೀಡಲಾಗುವುದು.
 • ಜಿಲ್ಲಾ ಆಸ್ಪತ್ರೆ, ಸಮುದಾಯ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿನ ಇ.ಎನ್.ಟಿ. ತಜ್ಞರು ಹಾಗೂ ಆಡಿಯೋಲಾಜಿ ತಂಡದವರಿಗೆ ಮೂಲಸೌಕರ್ಯಗಳನ್ನು ಒದಗಿಸುವುದು. 
 • ಪುನರ್ವಸತಿ ಸೇರಿದಂತೆ ಸೇವಾ ನಿಬಂಧನೆ - ಶ್ರವಣದೋಷ ಮತ್ತು ಕಿವುಡುತನವನ್ನು ಅತಿ ಶೀಘ್ರದಲ್ಲಿ ಪತ್ತೆಹಚ್ಚಲು ತಪಾಸಣೆ ಶಿಬಿರಗಳು, ಶ್ರವಣ ಮತ್ತು ಸಂವಹನ ದುರ್ಬಲ ಪ್ರಕರಣಗಳ ನಿರ್ವಹಣೆ ಮತ್ತು ಪುನರ್ವಸತಿ ಹಾಗೂ ವಿವಿಧ ಹಂತದ ಆರೋಗ್ಯ ವಿತರಣಾ ವ್ಯವಸ್ಥೆಯಲ್ಲಿದೆ. 
 • ಮಾಹಿತಿ ಶಿಕ್ಷಣ ಮತ್ತು ಸಂರ್ಪಕ ಚಟುವಟಿಕೆಗಳ ಮೂಲಕ ಜಾಗೃತಿ ಮೂಡಿಸುವುದು - ಶ್ರವಣದೋಷವುಳ್ಳವರನ್ನು ವಿಶೇಷವಾಗಿ ಮಕ್ಕಳನ್ನು ಪ್ರಾಥಮಿಕ ಹಂತದಲ್ಲಿ ಗುರುತಿಸಿ, ಅಂತಹ ಪ್ರಕರಣಗಳ ಸಮಯೋಚಿತ ನಿರ್ವಹಣೆ ಸಾಧ್ಯ ಮತ್ತು ಕಿವುಡುತನಕ್ಕೆ ಅಂಟಿಕೊಂಡಿರುವ ಕಳಂಕವನ್ನು ತೆಗೆದುಹಾಕುವುದು. 
 • ಉಸ್ತುವಾರಿ ಮತ್ತು ಮೌಲ್ಯಮಾಪನ.

 

ಕಾರ್ಯಕ್ರಮದ ನೀರಿಕ್ಷಿತ ಪ್ರಯೋಜನಗಳು:

ಕಾರ್ಯಕ್ರಮವು ಈ ಕೆಳಗಿನ ಪ್ರಯೋಜನಗಳನ್ನು ಅಲ್ಪಾವಧಿಯಲ್ಲಿ ಮತ್ತು ದೀರ್ಘಾವಧಿಯಲ್ಲಿ ಗುರಿಹೊಂದುವ ನಿರೀಕ್ಷೆಯಿದೆ.

 • ಶ್ರವಣದೋಷ ಮತ್ತು ಕಿವುಡುತನವನ್ನು ಆರಂಭಿಕ ಹಂತದಲ್ಲಿಯೇ ಪ್ರಾಥಮಿಕ ಆರೋಗ್ಯ ಕೇಂದ್ರ / ಸಮುದಾಯ ಆರೋಗ್ಯ ಕೇಂದ್ರಗಳು / ಜಿಲ್ಲಾ ಆಸ್ಪತ್ರೆಗಳಲ್ಲಿ ತಪಾಸಣೆ ನಡೆಸಿ ಸೂಕ್ತ ಚಿಕಿತ್ಸೆ ಕೊಡಿಸುವುದು ಹಾಗೂ ಪುನರ್ವಸತಿಗಾಗಿ ಸೂಚಿಸಬಹುದು.
 • ಶ್ರವಣದೋಷವುಳ್ಳವರ ಪ್ರಮಾಣವನ್ನು ಇಳಿಕೆ ಮಾಡಬಹುದು.
 • ಹೆಚ್ಚಿನ ಸಂಖ್ಯೆಯ ಪ್ರಕರಣಗಳಲ್ಲಿ ಶ್ರವಣದೋಷದ ತೀವ್ರತೆ ಹಾಗೂ ಅಸ್ವಸ್ಥತೆಯ ವ್ಯಾಪ್ತಿಯನ್ನು ಕಡಿಮೆಗೊಳಿಸಬಹುದು.
 • ರಾಜ್ಯ ಮತ್ತು ಜಿಲ್ಲೆಗಳಲ್ಲಿ ಕಾರ್ಯಕ್ರಮದ ವ್ಯಾಪ್ತಿಯಲ್ಲಿ ಬರುವ ಶ್ರವಣ ಅಸ್ವಸ್ಥತೆ ಹಾಗೂ ಶ್ರವಣದೋಷ ಸೇವೆಗಳಿಗೆ ಸೇವಾ ಜಾಲವನ್ನು ಸುಧಾರಿಸಬಹುದು.
 • ಜಿಲ್ಲಾ ಕಾರ್ಯಕ್ರಮ ಅಧಿಕಾರಿಗಳು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಿಂದ ಆರೋಗ್ಯ ಕಾರ್ಯಕರ್ತರು ಹಾಗೂ ಆಶಾ ಕಾರ್ಯಕರ್ತರುಗಳಿಗೆ ತರಬೇತಿ ನೀಡುವುದರ ಮೂಲಕ ತಳಮಟ್ಟದ ಕಾರ್ಯಕರ್ತರಲ್ಲಿ ಜಾಗೃತಿ ಮೂಡಿಸಲು ಅನುಕೂಲವಾಗುವುದು.
 • ಪಂಚಾಯತ್ ರಾಜ್ ಸಂಸ್ಥೆಗಳು, ಮಹಿಳಾ ಮಂಡಳಿಗಳು, ಗ್ರಾಮ ಸಂಸ್ಥೆಗಳ ಮೂಲಕ ಶ್ರವಣದೋಷವನ್ನು ತಡೆಗಟ್ಟಲು ಸಮುದಾಯಗಳಲ್ಲಿ ಭಾಗವಹಿಸುವ ಮೂಲಕ ಸಮಾಜದ ವಿಶಾಲ ವರ್ಣಪಟಲದಲ್ಲಿ ಸಾಮೂಹಿಕ ಜವಾಬ್ದಾರಿ ಚೌಕಟ್ಟನ್ನು ರಚಿಸಬಹುದು.
 • ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳ ನಾಯಕತ್ವ ನಿರ್ಮಾಣದೊಂದಿಗೆ ತಳಮಟ್ಟದಲ್ಲಿ ಅರಿವು ಮೂಡಿಸಲು ಸಹಾಯ ಮಾಡುತ್ತದೆ, ಇದು ಅಂತಿಮವಾಗಿ ಕಾರ್ಯಕ್ರಮವನ್ನು ಉತ್ತಮವಾಗಿ ಅನುಷ್ಠಾನಗೊಳಿಸಲು ಖಚಿತಪಡಿಸಬಹುದು.
 • ಉತ್ತಮ ಶ್ರವಣ ಆರೈಕೆ ಸೇವೆಗಳಿಗೆ ಜಿಲ್ಲಾ ಆಸ್ಪತ್ರೆಗಳಲ್ಲಿ ಸಾಮರ್ಥ್ಯವೃದ್ಧಿಯನ್ನು ಬಲಪಡಿಸಬಹುದು.

 

ಸಾಧನೆಗಳು:

2020-21ನೇ ಸಾಲಿನ ಶ್ರವಣ ದೋಷ ಅಂಕಿ ಅಂಶಗಳ ವರದಿ

ಶ್ರವಣದೋಷ ವರ್ಗ

0-5 ವರ್ಷ

6-15 ವರ್ಷ

16-50 ವರ್ಷ

> 50 ವರ್ಷ

ಒಟ್ಟು ಪ್ರಕರಣಗಳು

 

ಗಂಡು

ಹೆಣ್ಣು

ಒಟ್ಟು

ಗಂಡು

ಹೆಣ್ಣು

ಒಟ್ಟು

ಗಂಡು

ಹೆಣ್ಣು

ಒಟ್ಟು

ಗಂಡು

ಹೆಣ್ಣು

ಒಟ್ಟು

ಶ್ರವಣದೋಷ ತಪಾಸಣಾ ಫಲಾನುಭವಿಗಳ ಸಂಖ್ಯೆ

791

620

1411

2203

2206

4409

7241

5972

13213

6733

4604

11337

30370

ಸೌಮ್ಯ ಶ್ರವಣದೋಷ

203

160

363

609

653

1262

2236

1842

4078

1688

1303

2991

8694

ಮಧ್ಯಮ ಶ್ರವಣದೋಷ

143

131

274

659

607

1266

1896

1688

3584

2062

1384

3446

8570

ತೀವ್ರ ಶ್ರವಣದೋಷ

200

163

363

505

493

998

1654

1341

2995

1908

1198

3106

7462

ಗಂಭೀರ ಶ್ರವಣದೋಷ

245

166

411

430

453

883

1455

1101

2556

1075

719

1794

5644

 (ಮೂಲ: ಜಿಲ್ಲಾ ಮಟ್ಟದ ಎನ್.ಪಿ.ಪಿ.ಸಿ.ಡಿ. ಕಾರ್ಯಕ್ರಮದ ವರದಿ).

2020-21ನೇ ಸಾಲಿನಲ್ಲಿ .ಎನ್.ಟಿ. (ಕಿವಿ, ಮೂಗು, ಗಂಟಲು) ಶಸ್ತçಚಿಕಿತ್ಸಾ ಸೇವೆಗಳ ವರದಿ

.ಎನ್.ಟಿ ಶಸ್ತçಚಿಕಿತ್ಸೆಯ ಹೆಸರು

ಗಂಡು

ಹೆಣ್ಣು

ಒಟ್ಟು ಪ್ರಕರಣಗಳು

ಮೈರಿಂಗೊಪ್ಲಾಸ್ಟಿ

76

83

159

ಟಿಂಪ್ಯಾನೊಪ್ಲಾಸ್ಟಿ

119

155

274

ಮೈರಿಂಗೊಟಮಿ

65

33

98

ಗ್ರೊಮೆಟ್ ಅಳವಡಿಕೆ

56

63

119

ಸ್ಟೆಪಿಡೆಕ್ಟಮಿ

24

12

36

ಮ್ಯಾಸ್ಟಯಿಡೆಕ್ಟಮಿ

82

92

174

ಒಟ್ಟು

422

438

860

   (ಮೂಲ: ಜಿಲ್ಲಾ ಮಟ್ಟದ ಎನ್.ಪಿ.ಪಿ.ಸಿ.ಡಿ. ಕಾರ್ಯಕ್ರಮದ ವರದಿ).

 

2020-21ನೇ ಸಾಲಿನಲ್ಲಿ ಪುನರ್ವಸತಿ ಸೇವೆಗಳಿಗೆ ಸೂಚಿಸಲಾಗಿರುವುದು ಹಾಗೂ ಶ್ರವಣಯಂತ್ರ ಸಾಧನಗಳನ್ನು ಅಳವಡಿಸಿದ ಸಂಖ್ಯೆ

 

0-14 ವರ್ಷ

15-50 ವರ್ಷ

> 50 ವರ್ಷ

 

ಗಂಡು

ಹೆಣ್ಣು

ಒಟ್ಟು

ಗಂಡು

ಹೆಣ್ಣು

ಒಟ್ಟು

ಗಂಡು

ಹೆಣ್ಣು

ಒಟ್ಟು

ಪುನರ್ವಸತಿಗೆ ಸೂಚಿಸಲಾಗಿರುವ ವ್ಯಕ್ತಿಗಳ ಸಂಖ್ಯೆ

1037

1067

2104

2602

2231

4833

2879

1915

4794

11731

ಶ್ರವಣಯಂತ್ರ ಸಾಧನಗಳÀನ್ನು ಅಳವಡಿಸಿದ ಸಂಖ್ಯೆ

95

69

164

264

167

431

344

159

503

1098

 (ಮೂಲ: ಜಿಲ್ಲಾ ಮಟ್ಟದ ಎನ್.ಪಿ.ಪಿ.ಸಿ.ಡಿ. ಕಾರ್ಯಕ್ರಮದ ವರದಿ).

  

2020-21ನೇ ಸಾಲಿನಲ್ಲಿ ನವಜಾತ ಶಿಶುಗಳ ಶ್ರವಣದೋಷ ತಪಾಸಣೆ ವರದಿ

ಸಾಮಾನ್ಯವಾಗಿ ಜನಿಸಿದ ನವಜಾತ ಶಿಶುಗಳು

ಹೆಚ್ಚಿನತೊಂದರೆಯಿಂದ ಜನಿಸಿದ ನವಜಾತ ಶಿಶುಗಳು

ಒಟ್ಟು ಪ್ರಕರಣಗಳು

ಸಾಮಾನ್ಯ ವಾಕ್ ಶ್ರವಣ

ಹೆಚ್ಚಿನಚಿಕಿತ್ಸೆಗೆ ಸೂಚಿಸಿರುವುದು

ಒಟ್ಟು

ಸಾಮಾನ್ಯ ವಾಕ್ ಶ್ರವಣ

ಹೆಚ್ಚಿನಚಿಕಿತ್ಸೆಗೆ ಸೂಚಿಸಿರುವುದು

ಒಟ್ಟು

ಗಂಡು

ಹೆಣ್ಣು

ಗಂಡು

ಹೆಣ್ಣು

ಗಂಡು

ಹೆಣ್ಣು

ಗಂಡು

ಹೆಣ್ಣು

3411

1048

8384

525

13368

2857

829

8242

368

12296

25664

(ಮೂಲ: ಜಿಲ್ಲಾ ಮಟ್ಟದ ಎನ್.ಪಿ.ಪಿ.ಸಿ.ಡಿ. ಕಾರ್ಯಕ್ರಮದ ವರದಿ).

 

ಸಮೀಕ್ಷೆ ಮತ್ತು ವರದಿ:

2020-21ನೇ ಸಾಲಿನ ತಪಾಸಣಾ ಶಿಬಿರದ ವರದಿ

ತಪಾಷಣಾ ಶಿಬಿರಗಳ ಒಟ್ಟು ಸಂಖ್ಯೆ: 863

ಶಿಬಿರಗಳಲ್ಲಿ ಪರೀಕ್ಷಿಸಲ್ಪಟ್ಟ ರೋಗಿಗಳ ಸಂಖ್ಯೆ: 22299

                   

ಅಸ್ವಸ್ಥೆಗಳು

0-5 ವರ್ಷ

6-15 ವರ್ಷ

16-50 ವರ್ಷ

> 50 ವರ್ಷ

ಒಟ್ಟು

 

ಗಂಡು

ಹೆಣ್ಣು

ಗಂಡು

ಹೆಣ್ಣು

ಗಂಡು

ಹೆಣ್ಣು

ಗಂಡು

ಹೆಣ್ಣು

 

ಕಿವುಡುತನ

391

457

1200

1205

3001

2562

2777

2321

13914

 

ಸೌಮ್ಯ ಶ್ರವಣದೋಷ

112

135

282

272

562

511

525

435

2834

 

ಮಧ್ಯಮ ಶ್ರವಣದೋಷ

46

60

208

231

622

521

615

508

2811

 

ತೀವ್ರ ಶ್ರವಣದೋಷ

64

67

205

187

437

342

467

375

2144

 

ಗಂಭೀರ ಶ್ರವಣದೋಷ

55

65

153

158

470

377

349

263

1890

 

ಸೇವೆಗಳು / ಶಸ್ತçಚಿಕಿತ್ಸೆಗಳು /ಶ್ರವಣ ಸಾಧನ / ಪುನರ್ವಸತಿ ಇತ್ಯಾದಿಗಳಿಗೆ ಕಾಯುತ್ತಿರುವ ಪ್ರಕರಣಗಳ ಸಂಖ್ಯೆ

114

130

352

357

910

811

821

740

4235

 

                   

 

                   

 

ಅಸ್ವಸ್ಥೆಗಳು

0-5 ವರ್ಷ

6-15 ವರ್ಷ

16-50 ವರ್ಷ

> 50 ವರ್ಷ

ಒಟ್ಟು

 

ಗಂಡು

ಹೆಣ್ಣು

ಗಂಡು

ಹೆಣ್ಣು

ಗಂಡು

ಹೆಣ್ಣು

ಗಂಡು

ಹೆಣ್ಣು

 

ಸಿಎಸ್‌ಓಎಮ್

319

319

839

800

1693

1517

1189

915

7591

 

ಎಎಸ್‌ಓಎಮ್

533

518

682

650

1171

1029

668

556

5807

 

ಸೆಕ್ರೆಟರಿ ಓಎಮ್

183

180

400

435

514

450

311

266

2739

 

ಕಿವಿ ಗುಗ್ಗೆ

628

579

1050

1059

1556

1234

1143

796

8045

 

ಕಿವಿ ಆಘಾತ

57

61

240

236

442

346

268

245

1895

 

ಸಂವಹನ ತೊಂದರೆಗಳು

197

185

282

269

267

161

105

40

1506

 

ಇತರೆ

165

171

261

233

1211

797

584

405

3827

 

                                                   

(ಮೂಲ: ಜಿಲ್ಲಾ ಮಟ್ಟದ ಎನ್.ಪಿ.ಪಿ.ಸಿ.ಡಿ. ಕಾರ್ಯಕ್ರಮದ ವರದಿ).

 

ಮಾರ್ಗಸೂಚಿಗಳು / ಕೈಪಿಡಿಗಳು / ಆದೇಶಗಳು / ಸುತ್ತೋಲೆಗಳು ಇತ್ಯಾದಿ:

 • ಭಾರತ ಸರ್ಕಾರದ ಎನ್.ಪಿ.ಪಿ.ಸಿ.ಡಿ. ಕಾರ್ಯಕ್ರಮದ ಮಾರ್ಗಸೂಚಿ.
 • 07 ಹಂತಗಳ ತರಬೇತಿ ಕಾರ್ಯಕ್ರಮದ ಕೈಪಿಡಿಗಳು.

 

ಪದೇ ಪದೇ ಕೇಳಲಾಗುವ ಪಶ್ನೆಗಳು

ಶ್ರವಣದೋಷ ಎಂದರೇನು?

ಕೇಳಲು ಸಾಧ್ಯವಾಗದ ವ್ಯಕ್ತಿ ಅಥವಾ ಎರಡೂ ಕಿವಿಗಳಲ್ಲಿ ಉತ್ತಮ ಶ್ರವಣ ಹೊಂದಿರುವ ಆದರೆ - ಶ್ರವಣ ಮಿತಿ 25 ಡೆಸಿಬಲ್ ಇದ್ದರೆ – ಅವರಿಗೆ ಶ್ರವಣದೋಷವಿದೆ ಎಂದು ಹೇಳಲಾಗುತ್ತದೆ.

ಶ್ರವಣದೋಷದ ವಿಭಿನ್ನ ಶ್ರೇಣಿಗಳು:

 • ಸೌಮ್ಯ: ಗದ್ದಲದ ಸ್ಥಳಗಳಲ್ಲಿ ಮಾತು / ಮೃದುವಾದ ಮಾತನ್ನು ಅರ್ಥ ಮಾಡಿಕೊಳ್ಳುವಲ್ಲಿ ಸ್ವಲ್ಪ ತೊಂದರೆ 
 • ಮಧ್ಯಮ: ಸಾಮಾನ್ಯ ಸಂಭಾಷಣೆಗಳನ್ನು ಕೇಳುವಲ್ಲಿ ತೊಂದರೆ 
 • ತೀವ್ರ: ಗಟ್ಟಿಯಾಗಿ ಆಡಿದ ಶಬ್ದಗಳನ್ನು ಹೊರತುಪಡಿಸಿ ಎಲ್ಲವನ್ನೂ ಕೇಳುವಲ್ಲಿ ತೊಂದರೆ
 • ಅತಿ ತೀವ್ರ: ಗಟ್ಟಿಯಾಗಿ ಆಡಿದ ಶಬ್ದಗಳನ್ನು ಕೇಳಲು ಅಸಮರ್ಥತೆ

 

ಕಿವುಡುತನ ಎಂದರೇನು?

ಕೇಳಲು ಸಾಧ್ಯವಾಗದ ವ್ಯಕ್ತಿ ಅಥವಾ ಎರಡೂ ಕಿವಿಗಳಲ್ಲಿ ಉತ್ತಮ ಶ್ರವಣ ಹೊಂದಿರುವ ಆದರೆ - ಶ್ರವಣ ಮಿತಿ 25 ಡೆಸಿಬಲ್ ಇದ್ದರೆ – ಅವರಿಗೆ ಶ್ರವಣದೋಷವಿದೆ ಎಂದು ಹೇಳಲಾಗುತ್ತದೆ. ಶ್ರವಣ ದೋಷವು ಸೌಮ್ಯ, ಮಧ್ಯಮ, ಗಂಭೀರ ಅಥವಾ ಅತಿ ಗಂಭೀರವಾಗಿರಬಹುದು. ಇದು ಒಂದು ಕಿವಿ ಅಥವಾ ಎರಡೂ ಕಿವಿಗಳ ಮೇಲೆ ಪರಿಣಾಮ ಬೀರಬಹುದು ಮತ್ತು ಸಂಭಾಷಣಾ, ಭಾಷಣ ಅಥವಾ ದೊಡ್ಡ ಶಬ್ದಗಳನ್ನು ಕೇಳುವಲ್ಲಿ ತೊಂದರೆ ಉಂಟುಮಾಡುತ್ತದೆ.

 

ಶ್ರವಣದೋಷದ ಅಪಾಯ ಯಾರಿಗೆ ಇದೆ?

 • 60 ವರ್ಷಕ್ಕಿಂತ ಮೇಲ್ಪಟ್ಟವರು.
 • ಜೋರಾಗಿ ಸಂಗೀತವನ್ನು ಹೆಚ್ಚಾಗಿ ಕೇಳುವುದು.
 • ಗದ್ದಲದ ಪರಿಸರದಲ್ಲಿ ಕೆಲಸ ಮಾಡುವುದು.
 • ಕಿವಿಗೆ ಹಾನಿ ಉಂಟುಮಾಡುವ ಔಷಧಿಗಳನ್ನು ತೆಗೆದುಕೊಳ್ಳುವುದು.

 

ನನ್ನ ಶ್ರವಣವನ್ನು ನಾನು ಏಕೆ ಪರಿಶೀಲಿಸಬೇಕು?

ಅನೇಕ ಜನರಿಗೆ ತಮಗೆ ಶ್ರವಣದೋಷವಿರುವುದರ ಅರಿವಿಲ್ಲ. ನಿಯಮಿತ ಶ್ರವಣ ತಪಾಸಣೆಗಳ ಮೂಲಕ ಶ್ರವಣ ದೋಷವನ್ನು ಆದಷ್ಟು ಬೇಗ ಗುರುತಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಬಹುದು. ಇದರಿಂದ ನೀವು ಕ್ರಮ ತೆಗೆದುಕೊಳ್ಳಬಹುದು ಮತ್ತು ನಿಮ್ಮ ಸುತ್ತಲಿನ ಶಬ್ದಗಳನ್ನು ಆನಂದಿಸುವುದನ್ನು ಮುಂದುವರಿಸಬಹುದು. ಈ ತಪಾಸಣೆಗಳನ್ನು ಎಲ್ಲಿ ತೆಗೆದುಕೊಳ್ಳಬಹುದು ಎಂಬುದನ್ನು ಕಂಡು ಹಿಡಿಯಲು ಹತ್ತಿರದ ಆರೋಗ್ಯ ಕೇಂದ್ರಗಳನ್ನು ಸಂಪರ್ಕಿಸಿ.

 

ಶ್ರವಣದೋಷವು ನನ್ನ ಜೀವನದ ಮೇಲೆ ಹೇಗೆ ಪರಿಣಾಮ ಬೀರುತ್ತದೆ?

ಶ್ರವಣದೋಷವನ್ನು ಪರಿಹರಿಸದಿದ್ದರೆ, ಅದು ಜನರ ಮೇಲೆ ವಿಭಿನ್ನ ರೀತಿಯಲ್ಲಿ ಪರಿಣಾಮ ಬೀರಬಹುದು: ಮಕ್ಕಳಿಗೆ ಕಲಿಯಲು ತೊಂದರೆಗಳಿರಬಹುದು; ವಯಸ್ಕರಿಗೆ ಕೆಲಸದಲ್ಲಿ ಸವಾಲುಗಳು ಇರಬಹುದು ಮತ್ತು ವಯಸ್ಸಾದ ಜನರು ಪ್ರತ್ಯೇಕತೆ ಮತ್ತು ಅಸಮಾಧಾನವನ್ನು ಅನುಭವಿಸಬಹುದು. ಸಾಮಾನ್ಯವಾಗಿ, ಅದನ್ನು ಪರಿಹರಿಸದಿದ್ದರೆ, ಶ್ರವಣ ದೋಷವು ಸಂಭಾಷಣೆಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಸಾಮಾಜಿಕವಾಗಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಲು ಕಷ್ಟವಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಆರೋಗ್ಯ ಕೇಂದ್ರಗಳನ್ನು ಸಂಪರ್ಕಿಸಿ.

 

ಸಂಗೀತವನ್ನು ಕೇಳುವುದು ನನ್ನ ಕಿವಿಯ ಮೇಲೆ ಪರಿಣಾಮ ಬೀರಬಹುದೇ?

ದೀರ್ಘಕಾಲದವರೆಗೆ ಜೋರಾದ ಶಬ್ಧದೊಂದಿಗೆ ಸಂಗೀತವನ್ನು ಕೇಳುವುದರಿಂದ ಮತ್ತು ನಿಮ್ಮ ಕಿವಿಗಳಲ್ಲಿನ ಸಂವೇದನಾ ಕೋಶಗಳನ್ನು ಹಾನಿಗೊಳಿಸಬಹುದು. ಮೊದಲಿಗೆ ನೀವು ಕೇವಲ ತಾತ್ಕಾಲಿಕ ಶ್ರವಣ ದೋಷವನ್ನು ಅನುಭವಿಸಬಹುದು. ಇದು ಕಿವಿಯಲ್ಲಿ ರಿಂಗಿAಗ್ ಸಂವೇದನೆ (ಟಿನ್ನಿಟಸ್) ಆಗಿ ಪ್ರಕಟವಾಗುತ್ತದೆ. ಕಾಲಾನಂತರದಲ್ಲಿ ಇದು ಬದಲಾಯಿಸಲಾಗದ ಶ್ರವಣದೋಷ ಮತ್ತು ಟಿನ್ನಿಟಸ್‌ನೊಂದಿಗೆ ಶಾಶ್ವತ ಹಾನಿಯನ್ನುಂಟುಮಾಡುತ್ತದೆ.

 

ಶ್ರವಣ ದೋಷದ ಪರಿಣಾಮ ಏನು?

 

ಕ್ರಿಯಾತ್ಮಕ ಪರಿಣಾಮ

ಶ್ರವಣ ದೋಷದ ಒಂದು ಪ್ರಮುಖ ಪರಿಣಾಮವೆಂದರೆ ವ್ಯಕ್ತಿಯೊಂದಿಗೆ, ಇತರರೊಂದಿಗೆ ಸಂವಹನ ನಡೆಸುವ ಸಾಮರ್ಥ್ಯ. ಶ್ರವಣದೋಷವಿಲ್ಲದ ಮಕ್ಕಳಲ್ಲಿ ಮಾತನಾಡುವ ಭಾಷೆಯ ಬೆಳವಣಿಗೆ ಹೆಚ್ಚಾಗಿ ವಿಳಂಬವಾಗುತ್ತದೆ. ಗಮನಿಸದ ಶ್ರವಣದೋಷ ಮತ್ತು ಕಿವಿಯ ಕೊಳವೆಯ ಸೋಂಕಿನಂತಹ ಕಾಯಿಲೆಗಳು ಮಕ್ಕಳ ಶೈಕ್ಷಣಿಕ ಕಾರ್ಯಕ್ಷಮತೆಯ ಮೇಲೆ ಗಮನಾರ್ಹವಾಗಿ ವ್ಯತಿರಿಕ್ತ ಪರಿಣಾಮ ಬೀರುತ್ತವೆ. ಅವರು ಹೆಚ್ಚಿನ ದರ್ಜೆಯ ವೈಫಲ್ಯದ ಪ್ರಮಾಣಕ್ಕೆ ಒಳಗಾಗುತ್ತಾರೆ ಮತ್ತು ಹೆಚ್ಚಿನ ಶಿಕ್ಷಣ ಸಹಾಯದ ಅಗತ್ಯವನ್ನು ಹೊಂದಿರುತ್ತಾರೆ. ಸೂಕ್ತವಾದ ಕಲಿಕೆಯ ಅನುಭವಗಳಿಗೆ ಸೂಕ್ತವಾದ ವ್ಯವಸ್ಥೆಯು ಮುಖ್ಯವಾಗಿದೆ ಆದರೆ ಯಾವಾಗಲೂ ಲಭ್ಯವಿರುವುದಿಲ್ಲ.

 

ಸಾಮಾಜಿಕ ಮತ್ತು ಭಾವನಾತ್ಮಕ ಪ್ರಭಾವ

ಸಂವಹನ ಮತ್ತು ಶ್ರವಣದೋಷದಿಂದ ದೂರ ಉಳಿದಲ್ಲಿ ನಮ್ಮ ದೈನಂದಿನ ಜೀವನದಲ್ಲಿ ಗಮನಾರ್ಹ ಪರಿಣಾಮ ಬೀರುತ್ತದೆ, ಒಂಟಿತನ, ಪ್ರತ್ಯೇಕತೆ ಮತ್ತು ಹತಾಶೆಯ ಭಾವನೆಗಳನ್ನು ಉಂಟುಮಾಡುತ್ತದೆ, ಅದರಲ್ಲಿ ವಿಶೇಷವಾಗಿ ಈ ಲಕ್ಷಣಗಳು ವಯಸ್ಸಾದವರಲ್ಲಿ ಹೆಚ್ಚಾಗಿ ಕಂಡುಬರುತ್ತದೆ.

 

ಆರ್ಥಿಕ ಪರಿಣಾಮ

 • ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಶ್ರವಣ ದೋಷವು ವಾರ್ಷಿಕ ಯು.ಎಸ್.ಡಾಲರ್ 750 ಬಿಲಿಯನ್ ಜಾಗತಿಕ ವೆಚ್ಚವನ್ನುಂಟುಮಾಡುತ್ತದೆ ಎಂದು ಅಂದಾಜಿಸಲಾಗಿದೆ.
 • ಇದರಲ್ಲಿ ಆರೋಗ್ಯ ವಲಯದ ವೆಚ್ಚಗಳು (ಶ್ರವಣ ಸಾಧನಗಳ ವೆಚ್ಚವನ್ನು ಹೊರತುಪಡಿಸಿ), ಶೈಕ್ಷಣಿಕ ಬೆಂಬಲದ ವೆಚ್ಚಗಳು, ಉತ್ಪಾದಕತೆಯ ನಷ್ಟ ಮತ್ತು ಸಾಮಾಜಿಕ ವೆಚ್ಚಗಳು ಸೇರಿವೆ.
 • ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ, ಶ್ರವಣ ದೋಷ ಮತ್ತು ಕಿವುಡುತನದ ಮಕ್ಕಳು ಯಾವುದೇ ಶಾಲಾ ಶಿಕ್ಷಣವನ್ನು ಪಡೆಯುವುದಿಲ್ಲ. ಶ್ರವಣ ದೋಷ ಹೊಂದಿರುವ ವಯಸ್ಕರು ನಿರುದ್ಯೋಗ ಪ್ರಮಾಣವನ್ನು ಹೆಚ್ಚು ಹೊಂದಿರುತ್ತಾರೆ. ಉದ್ಯೋಗದಲ್ಲಿರುವವರಲ್ಲಿ ಸಾಮಾನ್ಯ ಉದ್ಯೋಗಿಗಳಿಗೆ ಹೋಲಿಸಿದರೆ ಹೆಚ್ಚಿನ ಶೇಕಡವಾರು ಶ್ರವಣದೋಷ ಉದ್ಯೋಗಿಗಳು ಕಡಿಮೆ ಶ್ರೇಣಿಯಲ್ಲಿದ್ದಾರೆ.
 • ವಿಶೇಷವಾಗಿ ಅಗತ್ಯವಿರುವ ಶ್ರವಣದೋಷವುಳ್ಳ ಜನರಿಗೆ ಉದ್ಯೋಗದಲ್ಲಿ ಜಾಗೃತಿ ಮೂಡಿಸುವುದರಿಂದ ಶಿಕ್ಷಣ ಮತ್ತು ವೃತ್ತಿಪರ ಪುನರ್ವಸತಿ ಸೇವೆಗಳಿಗೆ ಪ್ರವೇಶವನ್ನು ಸುಧಾರಿಸುವುದು. ಶ್ರವಣ ದೋಷವಿರುವ ಜನರಿಗೆ ನಿರುದ್ಯೋಗ ಸಂಖ್ಯೆಯನ್ನು ಕಡಿಮೆ ಮಾಡುತ್ತದೆ.

 

ನನ್ನ ಕಿವಿಗಳನ್ನು ನಾನು ಹೇಗೆ ಕಾಳಜಿ ವಹಿಸಬೇಕು?

 

ನಿಮ್ಮ ಕಿವಿಗಳನ್ನು ನೀವು ಈ ಮೂಲಕ ಕಾಳಜಿ ವಹಿಸಬಹುದು:

 • ನೀವು ಎಂದಿಗೂ ಯಾವುದೇ ವಸ್ತು (ಹತ್ತಿ ಸ್ಟಾö್ಯಬ್ ಇತರೆ) ಗಳನ್ನು ನಿಮ್ಮ ಕಿವಿಗೆ ಹಾಕುವುದಿಲ್ಲ ಎಂದು ಖಚಿತಪಡಿಸಿಕೊಳ್ಳುವುದು.
 • ಶಬ್ದದ ಪ್ರಮಾಣ ಕಡಿಮೆ ಇಡುವುದು ಮತ್ತು ಕೇಳುವ ಸಮಯವನ್ನು ಸೀಮಿತಗೊಳಿಸುವುದು.
 • ಗದ್ದಲದ ಸ್ಥಳಗಳಲ್ಲಿ ಅಥವಾ ಗದ್ದಲದ ಚಟುವಟಿಕೆಗಳನ್ನು ಮಾಡುವಾಗ ಇಯರ್‌ಪ್ಲಗ್‌ಗಳನ್ನು ಬಳಸುವುದು.
 • ಕಿವಿಯಿಂದ ಯಾವುದೇ ನೋವು ಅಥವಾ ಕಿವಿ ಸೋರುವಿಕೆ ಉಂಟಾದಲ್ಲಿ ಶೀಘ್ರವೇ ವೈದ್ಯರನ್ನು ಸಂಪರ್ಕಿಸುವುದು.
 • ನಿಮ್ಮ ಕಿವಿಗಳು ಸರಿಯಾಗಿ ಕೇಳುತ್ತಿಲ್ಲವಾದಲ್ಲಿ ಅಥವಾ ಟಿನ್ನಿಟಸ್ (ರಿಂಗಿAಗ್) ಹೊಂದಿದ್ದಲ್ಲಿ ಆರೋಗ್ಯ ತಜ್ಞವೈದ್ಯರನ್ನು ಸಂಪರ್ಕಿಸುವುದು.

 

ಶ್ರವಣ ದೋಷವನ್ನು ಹೇಗೆ ಕಂಡು ಹಿಡಿಯಲಾಗುತ್ತದೆ?

ಶ್ರವಣ ದೋಷವನ್ನು ಪತ್ತೆಹಚ್ಚಲು ವೃತ್ತಿಪರ ಶ್ರವಣ ಮೌಲ್ಯಮಾಪನ ಅಗತ್ಯವಿದೆ. ಅತ್ಯಂತ ಸಾಮಾನ್ಯವಾದ ಪರೀಕ್ಷೆಯೆಂದರೆ ಆಡಿಯೊಮೆಟ್ರಿ – ಇದು ಕನಿಷ್ಠ ಧ್ವನಿ ಮಟ್ಟವನ್ನು (ಡೆಸಿಬೆಲ್‌ಗಳಲ್ಲಿ) ಗುರುತಿಸುತ್ತದೆ. ಇದರಲ್ಲಿ ನೀವು ವಿಭಿನ್ನ ಧ್ವನಿ ಅವರ್ತನಗಳನ್ನು (ಪಿಚ್) ಕೇಳಬಹುದು. ಶ್ರವಣ ದೋಷದ ಉಪಸ್ಥಿತಿ, ಪ್ರಕಾರ ಮತ್ತು ದರ್ಜೆಯನ್ನು ಗುರುತಿಸಲು ಇದನ್ನು ಬಳಸಲಾಗುತ್ತದೆ.

 

ಭಾರತದಲ್ಲಿ ಕಿವುಡುತನ ಮತ್ತು ಪರಸ್ಪರತೆಗಾಗಿ ಮಕ್ಕಳನ್ನು ಪರೀಕ್ಷಿಸಲಾಗಿದೆಯೇ?

ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಭಾರತ ಸರ್ಕಾರವು 2013 ರಿಂದ ರಾಷ್ಟ್ರೀಯ ಶ್ರವಣದೋಷ ನಿಯಂತ್ರಣ ಮತ್ತು ನಿವಾರಣಾ ಕಾರ್ಯಕ್ರಮ ಅಲ್ಲದೆ ರಾಷ್ಟ್ರೀಯ ಬಾಲ ಸ್ವಾಸ್ತö್ಯ ಕಾರ್ಯಕ್ರಮದಲ್ಲಿಯೂ (ಆರ್.ಬಿ.ಎಸ್.ಕೆ.) ಜಾರಿಗೊಳಿಸಲಾಗಿದೆ. 0-18 ವರ್ಷ ವಯಸ್ಸಿನ ಮಕ್ಕಳನ್ನು 04 ಡಿ ಗಳಿಂದ ಪರೀಕ್ಷಿಸಲು ಅಂದರೆ, ಆಯ್ದ 30 ಆರೋಗ್ಯ ಪರಿಸ್ಥಿತಿಗಳಿಗೆ ಅಂಗವೈಕಲ್ಯ ಸೇರಿದಂತೆ ದೋಷಗಳು, ಕೊರತೆಗಳು, ಅಭಿವೃದ್ಧಿ ವಿಳಂಬಗಳು ಮಕ್ಕಳಲ್ಲಿ ಶ್ರವಣದೋಷ / ಕಿವುಡುತನವು ಕೂಡಾ ಇದರಲ್ಲಿ ಸೇರಿದೆ.

 

 

ಭಾರತದಲ್ಲಿ ಮಕ್ಕಳಲ್ಲಿ ಕಿವುಡುತನ ಸಂಭವಿಸುವ ಪ್ರಮಾಣ ಎಷ್ಟು?

ಭಾರತದಲ್ಲಿ ಜನ್ಮಜಾತ ಶ್ರವಣ ದೋಷವು 1000 ಜೀವಂತ ಜನನಕ್ಕೆ 5.6 ರಿಂದ 10 ಎಂದು ವರದಿಯಾಗಿದೆ. ಕಿವಿಯ ಕೊಳವೆಯ ಸೋಂಕು ಕಾಯಿಲೆಗಳಲ್ಲಿಯೂ ಶ್ರವಣದೋಷವು ಸಾಧ್ಯ: ವಿವಿಧ ಸಮೀಕ್ಷೆಗಳಲ್ಲಿ ಈ ಸೋಂಕಿನಿAದ ಹರಡುವಿಕೆಯು ಶೇಕಡ 8.6 ರಷ್ಟಿದೆ. 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಶ್ರವಣ ದೋಷವು ಶೇಕಡ 5.4 ರಷ್ಟಿದೆ ಎಂದು ವರದಿಯಾಗಿದೆ.

 

ನಾನು ಶ್ರವಣ ದೋಷದಿಂದ ಬಳಲುತ್ತಿದ್ದರೆ ಏನು ಮಾಡಬೇಕು?

 ಶ್ರವಣ ದೋಷದ ನಿರ್ವಹಣೆ ಅದರ ಕಾರಣ, ಪ್ರಕಾರ ಮತ್ತು ದರ್ಜೆಯ ಮೇಲೆ ಅವಲಂಬಿತವಾಗಿರುತ್ತದೆ. ನೀವು ಹೆಚ್ಚು ಸೂಕ್ತವಾದ ಮಧ್ಯಸ್ಥಿಕೆಗಳ ಬಗ್ಗೆ ಸಲಹೆ ನೀಡುವ ಆರೋಗ್ಯ ವೃತ್ತಿಪರರನ್ನು ಸಂಪರ್ಕಿಸಬೇಕು.

 

ಐಇಸಿ ಚಟುವಟಿಕೆಯ ವಿವರಗಳು:

 

 1. ಕರಪತ್ರಗಳು.
 2. ಬಿತ್ತಿಪತ್ರಗಳು.

ಇತ್ತೀಚಿನ ನವೀಕರಣ​ : 15-11-2023 10:10 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ರಾಷ್ಟ್ರೀಯ ಆರೋಗ್ಯ ಅಭಿಯಾನ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080