ಅಭಿಪ್ರಾಯ / ಸಲಹೆಗಳು

ಮಕ್ಕಳ ಆರೋಗ್ಯ

ಮಕ್ಕಳ ಆರೋಗ್ಯ ಕಾರ್ಯಕ್ರಮ

ನವಜಾತ ಶಿಶು ಮತ್ತು 5 ವರ್ಷದೊಳಗಿನ ಶಿಶುಗಳ ಮರಣದರವನ್ನು ಕಡಿತಗೊಳಿಸಲು  ಮತ್ತು ಮಕ್ಕಳ ಆರೋಗ್ಯವನ್ನು ಸುಧಾರಿಸುವುದರ ಮೂಲಕ ಶಿಶುಮರಣ ದರವನ್ನು ಕಡಿಮೆ ಮಾಡಲು ಹಲವಾರು ಆರೋಗ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅನುಷ್ಠಾನಗೊಳಿಸಲಾಗಿದೆ. ಆಧುನಿಕ ವೈಜ್ಞಾನಿಕ ವಿಧಾನಗಳನ್ನು ಅನುಸರಿಸುವುದರ ಮೂಲಕ ಮಕ್ಕಳ ಆರೋಗ್ಯ ರಕ್ಷಣೆಯನ್ನು ಮಾಡಲಾಗುತ್ತಿದೆ. ಅವುಗಳೆಂದರೆ, ಸಾಂಸ್ಥಿಕ ಆಧಾರಿತ ನವಜಾತ ಶಿಶು ಆರೈಕೆ (ವಿಶೇಷ ನವಜಾತ ಶಿಶು ಆರೈಕೆ ಘಟಕ, ನವಜಾತ ಶಿಶು ಸ್ಥೀರಿಕರಣ ಘಟಕ, ನವಜಾತ ಶಿಶು ಆರೈಕೆ ಕೇಂದ್ರ), ಮನೆ ಆಧಾರಿತ ಶಿಶು ಆರೈಕೆ ಕಾರ್ಯಕ್ರಮ, ಜನನಿ ಶಿಶು ಸುರಕ್ಷಾ ಕಾರ್ಯಕ್ರಮ, ಶಿಶು ಮರಣ ಪರಿಶೀಲನೆ, ಕಾಂಗರೂ ಮದರ್ಕೇರ್, ತಾಯಿ ಎದೆ ಹಾಲುಣಿಸುವ ಕೇಂದ್ರಗಳ ಸ್ಥಾಪನೆ, ನವಜಾತ ಮತ್ತು ಮಕ್ಕಳ ಕಾಯಿಲೆಗಳ ಸಮಗ್ರ ನಿರ್ವಹಣಾ ಕಾರ್ಯಕ್ರಮ, ಅತಿಸಾರ ಭೇದಿ ನಿಯಂತ್ರಣ ಪಾಕ್ಷಿಕ ಆಚರಣೆ.

ಮಕ್ಕಳ ಆರೋಗ್ಯ ಸಾಧನೆಗಳು:

 • 2018 ನೇ ಸಾಲಿನ ಎಸ್.ಆರ್.ಎಸ್. ರಂತೆ ಶಿಶು ಮರಣ ದರವು 41 ರಿಂದ 23ಕ್ಕೆ ಇಳಿಕೆಯಾಗಿರುತ್ತದೆ. (2009-2018).
 • ಸಹಸ್ರಮಾನ ಅಭಿವೇದ್ಥಿ ಗುರಿಗಿಂತ 5 ಅಂಶಗಳ ಹೆಚ್ಚಿನಗುರಿಯನ್ನು ಸಾಧಿಸಲಾಗಿರುತ್ತದೆ.
 • ಪ್ರಸ್ತುತ 5 ವರ್ಷದೊಳಗಿನ ಶಿಶು ಮರಣ ದರವು 48 ರಿಂದ 28 ಕ್ಕೆ ಇಳಿಕೆಯಾಗುವುದರೊಂದಿಗೆ 2009 ರಿಂದ 20 ಅಂಶಗಳಷ್ಟು ಕಡಿಮೆಯಾಗಿರುತ್ತದೆ. 28 ರಿಂದ 25 ಅಂಶಗಳಿಗೆ ಮಕ್ಕಳ ಮರಣ ದರವನ್ನು ಇಳಿಕೆ ಮಾಡುವುದು 2030 ರ ಸುಸ್ತಿರ ಅಭಿವೃದ್ಧಿ ಗುರಿಯಾಗಿದೆ.
 • ನವಜಾತ ಶಿಶು ಮರಣ ದರವು 16 ಇದ್ದು, 12ಕ್ಕೆ ಇಳಿಕೆ ಮಾಡುವುದು 2030 ರ ಸುಸ್ಥಿರ ಅಭಿವೃದಿಯಾಗಿರುತ್ತದೆ.
 • ಪ್ರಸ್ತುತ ಏಳು ದಿನದೊಳಗಿನ ನವಜಾತ ಶಿಶು ಮರಣ ದರವು 12 ಅಂಶಗಳಿರುತ್ತವೆ.

 

ಆರೋಗ್ಯ ಸೂಚ್ಯಾಂಕಗಳು:

 

ಕ್ರ.ಸಂ

ಸೂಚ್ಯಾಂಕ

2011

2012

2013

2014

2015

2016

2017

2018*

1

ನವಜಾತ ಶಿಶು ಮರಣ ಪ್ರಮಾಣ

 (ಪ್ರತಿ 1000 ಜೀವಂತ ಜನನಕ್ಕೆ)

24

23

22

20

19

18

18

16

 2

ಶಿಶು ಮರಣ ಪ್ರಮಾಣ

(ಪ್ರತಿ 1000 ಜೀವಂತ ಜನನಕ್ಕೆ)

35

32

31

31

31

24

25

23

 3

5 ವರ್ಷದೊಳಗಿನ ಶಿಶುಮರಣ ಪ್ರಮಾಣ

(ಪ್ರತಿ 1000 ಜೀವಂತ ಜನನಕ್ಕೆ)

40

37

37

37

35

29

28

28

 

 1. ಸಾಂಸ್ಥಿಕ ಆಧಾರಿತ ನವಜಾತ ಶಿಶು ಆರೈಕೆ ಕಾರ್ಯಕ್ರಮಗಳು
 • ನವಜಾತ ಶಿಶು ಆರೈಕೆ ಕೇಂದ್ರ (ಎನ್.ಬಿ.ಸಿ.ಸಿ):

ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ತಾಲ್ಲೂಕು ಮಟ್ಟದ ಆಸ್ಪತ್ರೆಗಳು ಹಾಗೂ ಜಿಲ್ಲಾ ಮಟ್ಟದ ಆಸ್ಪತ್ರೆಗಳಲ್ಲಿ ನವಜಾತ ಶಿಶು ಆರೈಕೆಗಾಗಿ 1070 ನವಜಾತ ಶಿಶು ಆರೈಕೆ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಹೆರಿಗೆ ಕೊಠಡಿಯಲ್ಲಿ ಪ್ರತ್ಯೇಕ ಸ್ಥಳದಲ್ಲಿ ಮಗುವನ್ನು ಬೆಚ್ಚಗಿಡಲು ರೇಡಿಯಂಟ್ವಾರ್ಮಸ್ ರ್ಸೌಲಭ್ಯ ಒದಗಿಸಲಾಗಿದೆ. ಹಾಗೂ ಪ್ರಸವ ಸಮಯದಲ್ಲಿ ಉಸಿರುಗಟ್ಟುವಿಕೆಯಾದಲ್ಲಿ ಚಿಕಿತ್ಸೆ ನೀಡಲು ಅಗತ್ಯ ರಿಸಾಸಿಟೇಷನ್ ಉಪಕರಣ ಹಾಗೂ ಆಕ್ಸಿಜನ್ ಸೌಲಭ್ಯವನ್ನು ನೀಡಲಾಗಿರುತ್ತದೆ. ಈ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯಾಧಿಕಾರಿಗಳು ಮತ್ತು ಶುಶ್ರೂಷಕರುಗಳಿಗೆ ನವಜಾತ ಶಿಶು ಸುರಕ್ಷಾ ಕಾರ್ಯಕ್ರಮದಡಿ ತರಬೇತಿಯನ್ನು ನೀಡುವುದರ ಮೂಲಕ ಅವರಕಾರ್ಯದಕ್ಷತೆಯನ್ನು ಹೆಚ್ಚಿಸುವುದರ ಮೂಲಕ ಉತ್ತಮ ಸೇವೆಯನ್ನು ಒದಗಿಸಲಾಗುತ್ತಿದೆ.

 •  ನವಜಾತ ಶಿಶು ಸ್ಥೀರಿಕರಣ ಘಟಕ  (ಎನ್.ಬಿ.ಎಸ್.ಯು):

ರಾಜ್ಯದಲ್ಲಿ ಪ್ರಸ್ತುತ 165 ನವಜಾತ ಶಿಶು ಸ್ಥಿರೀಕರಣ ಘಟಕಗಳು (ಎನ್.ಬಿ.ಎಸ್.ಯು) ಕಾರ್ಯನಿರ್ವಹಿಸುತ್ತಿವೆ. ನವಜಾತ ಶಿಶು ಸ್ಥಿರೀಕರಣ ಘಟಕಗಳನ್ನು ಸಮುದಾಯ ಆರೋಗ್ಯ ಕೇಂದ್ರ ಎಪ್.ಆರ್.ಯು ಹಾಗೂ ತಾಲ್ಲೂಕು ಮಟ್ಟದ ಆಸ್ಪತ್ರೆಗಳಲ್ಲಿ ತೆರೆಯಲಾಗಿರುತ್ತದೆ. ಜನನ ಸಮಯದಲ್ಲಿ ತೊಂದರೆಗೊಳಗಾಗುವ ನವಜಾತ ಶಿಶುಗಳಿಗೆ ಅಗತ್ಯ ತುರ್ತು ಚಿಕಿತ್ಸೆ ನೀಡಲಾಗುವುದು. ಇದಲ್ಲದೇ ನವಜಾತ ಶಿಶುವಿನಲ್ಲಿ ಕಂಡುಬರುವ ಜಾಂಡೀಸ್ಕಾಯಿಲೆಗೆ ಅಗತ್ಯವಿರುವ ಫೋಟೋಥೆರಪಿ ಚಿಕಿತ್ಸೆಯನ್ನು ನೀಡಲು ಉಪಕರಣಗಳನ್ನು ಒದಗಿಸಲಾಗಿದೆ. ಹಾಗೂ ನವಜಾತ ಶಿಶುಗಳಲ್ಲಿ /ಮಕ್ಕಳಲ್ಲಿ ಕಂಡುಬರುವ ವಾಂತಿ, ಬೇಧಿ ಇತ್ಯಾದಿ ತೊಂದರೆಗಳಿಗೂ ಸಹ ಚಿಕಿತ್ಸೆಯನ್ನು ನೀಡಲಾಗುವುದು. ನವಜಾತ ಶಿಶುಸ್ಥಿರೀಕರಣಘಟಕಗಳಲ್ಲಿ ಇಬ್ಬರು ತರಬೇತಿ ಹೊಂದಿದ ಶುಶ್ರೂಷಕರುಗಳನ್ನು ನಿಯೋಜಿಸುವುದರ ಮೂಲಕ ಚಿಕಿತ್ಸೆಯನ್ನು ನೀಡುವುದರ ಮೂಲಕ ನವಜಾತ ಶಿಶುಗಳ ಆರೋಗ್ಯವನ್ನು ಪುನಶ್ಚೇತನಗೊಳಿಸಲಾಗುತ್ತಿದೆ.

 • ವಿಶೇಷ ನವಜಾತ ಶಿಶು ಆರೈಕೆ ಘಟಕಗಳು (ಎಸ್.ಎನ್.ಸಿ.ಯು):

ವಾರ್ಷಿಕ ಮೂರು ಸಾವಿರ ಹೆರಿಗೆಗಳು ಅಥವಾ ಹೆಚ್ಚು ಹೆರಿಗೆಗಳು ಸಂಭವಿಸುವ ಆಸ್ಪತ್ರೆಗಳಲ್ಲಿ 12 ಹಾಸಿಗೆಗಳುಳ್ಳ ವಿಶೇಷ ನವಜಾತ ಶಿಶು ಆರೈಕೆ ಘಟಕಗಳನ್ನು ತೆರೆಯುವುದರ ಮೂಲಕ ರೋಗಗ್ರಸ್ತ ಶಿಶುಗಳಿಗೆ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಪ್ರಸ್ತುತ ರಾಜ್ಯದಲ್ಲಿಒಟ್ಟು 42 ವಿಶೇಷ ನವಜಾತ ಶಿಶು ಆರೈಕೆ ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, ಇವುಗಳನ್ನು ಜಿಲ್ಲಾಆಸ್ಪತ್ರೆ / ಜಿಲ್ಲಾಮಟ್ಟದ ಆಸ್ಪತ್ರೆ, ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯ, ಹಾಗೂ ತಾಲ್ಲೂಕು ಆಸ್ಪತ್ರೆಗಳಲ್ಲಿ ಸ್ಥಾಪಿಸಲಾಗಿರುತ್ತದೆ.

ಕರ್ನಾಟಕದಲ್ಲಿ ಜಿಲ್ಲಾ ಆಸ್ಪತ್ರೆ ಹಾಗೂ ಜಿಲ್ಲಾಮಟ್ಟದ ಆಸ್ಪತ್ರೆಗಳಲ್ಲಿ ಒಟ್ಟು 42 ವಿಶೇಷ ನವಜಾತ ಶಿಶು ಆರೈಕೆ ಘಟಕಗಳು ಸ್ಥಾಪನೆಯಾಗಿವೆ. 14 ವಿಶೇಷ ನವಜಾತ ಶಿಶು ಆರೈಕೆ ಘಟಕಗಳು ವೈದ್ಯಕೀಯ ಮಹಾವಿದ್ಯಾಲಯಗಳ ಅಧೀನದಲ್ಲಿ ಕರ್ತವ್ಯನಿರ್ವಹಿಸುತ್ತಿವೆ. ಪ್ರಸ್ತುತ ಒಟ್ಟಾರೆ 980 ಹಾಸಿಗೆಗಳ ಸೌಲಭ್ಯವಿದ್ದು, ಸರಾಸರಿ ವಾರ್ಷಿಕ 77,000 ಶಿಶುಗಳು ಚಿಕಿತ್ಸೆಗಾಗಿ ದಾಖಲಾಗುತ್ತಿರುತ್ತವೆ.

ಮುಂದಿನ ದಿನಗಳಲ್ಲಿ ಎಂಟು ತಾಲ್ಲೂಕು ಆಸ್ಪತ್ರೆಗಳಲ್ಲಿ ಹೊಸಪೇಟೆ ಬಳ್ಳಾರಿ ಜಿಲ್ಲೆ, ಹುಮನಾಬಾದ್ ಬೀದರ್ ಜಿಲ್ಲೆ, ಜೇವರಗಿ ಕಲಬುರಗಿ ಜಿಲ್ಲೆ, ಶಿರಾ ತುಮಕೂರು ಜಿಲ್ಲೆ, ಹೊಳೆನರಸೀಪುರ ಹಾಸನ ಜಿಲ್ಲೆ, ಕೆ.ಆರ್.ಪೇಟೆ ಮಂಡ್ಯ ಜಿಲ್ಲೆ, ಗೋಕಾಕ್ ಬೆಳಗಾವಿ ಜಿಲ್ಲೆ ಮತ್ತು ಸಿ.ವಿ ರಾಮನ್ ಆಸ್ಪತ್ರೆ, ಬೆಂಗಳೂರು ನಗರ ಜಿಲ್ಲೆ ಇಲ್ಲಿ ಹೊಸದಾಗಿ ವಿಶೇಷ ನವಜಾತ ಶಿಶು ಆರೈಕೆ ಘಟಕಗಳನ್ನು ತೆರೆಯಲಾಗುವುದು.

ವಿಶೇಷ ನವಜಾತ ಶಿಶು ಆರೈಕೆ ಘಟಕಗಳಲ್ಲಿ ನೀಡುತ್ತಿರುವ ಸೇವೆಗಳು:

 • ಕಡಿಮೆ ಜನನ ತೂಕವುಳ್ಳ ಶಿಶುಗಳ ಆರೈಕೆ.
 • ತಾಯಿ ಎದೆಹಾಲುಣಿಸಲು ಸಲಹೆ ನೀಡುವುದು.
 • ರೋಗಗ್ರಸ್ತ ಶಿಶುಗಳ ಆರೈಕೆ.
 • ಸಿ.ಪಿ.ಎ.ಪಿ. ಹಾಗೂ ವೆಂಟಿಲೇಟ ರ್ಸೇವೆ ನೀಡುವುದು.
 • ಎಸ್.ಎನ್.ಸಿ.ಯುಗಳಿಂದ ಬಿಡುಗಡೆಯಾದ ಶಿಶುಗಳ ಆರೋಗ್ಯದ ಬಗ್ಗೆಅನುಸರಣೆ ಮಾಡುವುದು.
 • ಲಸಿಕಾ ಸೇವೆ.
 • ಹೆಚ್ಚಿನ ಚಿಕಿತ್ಸೆಗೆ ನಿರ್ದೇಶಿಸುವುದು.

 

 • ಕಾಂಗರೂ ಮದರ್ ಕೇರ್:

ಕಡಿಮೆ ಹುಟ್ಟು ತೂಕವುಳ್ಳ ನವಜಾತ ಶಿಶುಗಳಿಗೆ ಆರೈಕೆ ನೀಡಲು ವಿಶೇಷ ನವಜಾತ ಶಿಶು ಆರೈಕೆ ಘಟಕಗಳನ್ನು ಹೊಂದಿರುವ ಎಲ್ಲಾ ಆಸ್ಪತ್ರೆಗಳಲ್ಲಿ ಕಾಂಗರೂ ಮದರ್ಕೇ ರ್ವಾರ್ಡಗಳನ್ನು ತೆರೆಯಲಾಗುತ್ತಿದೆ. ಈ ಕೇಂದ್ರಗಳಲ್ಲಿ ತರಬೇತಿ ಹೊಂದಿದ ಶುಶ್ರೂಷಕಿಯರುಗಳನ್ನು ನೇಮಿಸುವುದರ ಮೂಲಕ ಸೂಕ್ತ ಆರೈಕೆಯನ್ನು ನವಜಾತ ಶಿಶುಗಳಿಗೆ ನೀಡಲಾಗುವುದು. ಈ ರೀತಿ ಕಾಂಗರೂ ಮದರ್ ಕೇರ್ ರ್ಆರೈಕೆ ನೀಡುವುದರಿಂದ ಶಿಶುಗಳ ತೂಕವನ್ನು ಹೆಚ್ಚಿಸಬಹುದಾಗಿದೆ.

 • ತಾಯಿ ಎದೆಹಾಲುಣಿಸುವ ಕೇಂದ್ರಗಳು:

ನವಜಾತ ಶಿಶುಗಳಿಗೆ ಹುಟ್ಟಿದ ಒಂದು ಗಂಟೆಯೊಳಗೆ ತಾಯಿ ಎದೆಹಾಲುಣಿಸಲು ಪ್ರೋತ್ಸಾಹಿಸುವ ದೃಷ್ಠಿಯಿಂದ ವಿಶೆಷ ನವಜಾತ ಶಿಶು ಆರೈಕೆ ಘಟಕಗಳು ಇರುವ ಆಸ್ಪತ್ರೆಗಳಲ್ಲಿ ತಾಯಿ ಎದೆಹಾಲುಣಿಸುವ ಕೇಂದ್ರಗಳನ್ನು ಸ್ತಾಪಿಸಲಾಗಿದೆ. ನಂತರದ ದಿನಗಳಲ್ಲಿ ಎಲ್ಲಾ ಹೆರಿಗೆ ಕೇಂದ್ರಗಳಲ್ಲಿ ಎದೆ ಹಾಲುಣಿಸುವ ಕೇಂದ್ರಗಳನ್ನು ತೆರೆಯಲು ಕ್ರಮವಹಿಸಲಾಗುವುದು.

 • ನವಜಾತ ಶಿಶುಸಾಗಣೆ:

ರೋಗಗ್ರಸ್ತ ನವಜಾತ ಶಿಶುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಹೆಚ್ಚಿನ ಸೌಲಭ್ಯವುಳ್ಳ ಆಸ್ಪತ್ರೆಗಳಿಗೆ ಸಾಗಿಸಲು ಪ್ರಯೋಗಾರ್ಥವಾಗಿ ಜಾರಿಗೊಳಿಸಲು ನಾಲ್ಕು ವಿಭಾಗಗಳಿಗೆ ತಲಾ ಒಂದರಂತೆ 4 ಆಂಬುಲೆನ್ಸ್ ಗಳನ್ನು ಖರೀದಿಸಲು ಅನುಮೋದನೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಅಗತ್ಯತೆಗೆ ಅನುಗುಣವಾಗಿ ಕ್ರಮವಹಿಸಲಾಗುವುದು.

ನವಜಾತ ಶಿಶು ಮತ್ತು 5 ವರ್ಷದೊಳಗಿನ ಶಿಶುಗಳ ಮರಣ ದರವನ್ನು ಕಡಿತಗೊಳಿಸಲು ಮತ್ತು ಮಕ್ಕಳ ಆರೋಗ್ಯವನ್ನು ಸುಧಾರಿಸುವದುರ ಮೂಲಕ ಶಿಶು ಮರಣ ದರವನ್ನು ಕಡಿಮೆ ಮಾಡಲು ಹಲವಾರು ಆರೋಗ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅನುಷ್ಠಾನಗೊಳಿಸಲಾಗಿದೆ. ಆಧುನಿಕ ವೈಜ್ಞಾನಿಕ ವಿಧಾನಗಳನ್ನು ಅನುಸರಿಸುವುದರ ಮೂಲಕ ಮಕ್ಕಳ ಆರೋಗ್ಯ ರಕ್ಷಣೆಯನ್ನು ಮಾಡಲಾಗುತ್ತಿದೆ. ಅವುಗಳೆಂದರೆ, ಸಾಂಸ್ಥಿಕ ಆಧಾರಿತ ನವಜಾತ ಶಿಶು ಆರೈಕೆ (ವಿಶೇಷ ನವಜಾತ ಶಿಶು ಆರೈಕೆ ಘಟಕ, ನವಜಾತ ಶಿಶು ಸ್ಥರೀಕರಣ ಘಟಕ, ನವಜಾತ ಶಿಶು ಆರೈಕೆ ಕೇಂದ್ರ), ಮನೆ ಆಧಾರಿತ ಶಿಶು ಆರೈಕೆ ಕಾರ್ಯಕ್ರಮ, ಜನನಿ ಶಿಶು ಸುರಕ್ಷಾ ಕಾರ್ಯಕ್ರಮ, ಶಿಶು ಮರಣ ಪರಿಶೀಲನೆ, ಕಾಂಗರೂ ಮದರ್ ಕೇರ್, ತಾಯಿ ಎದೆಹಾಲುಣಿಸುವ ಕೇಂದ್ರಗಳ ಸ್ಥಾಪನೆ, ನವಜಾತ ಮತ್ತು ಮಕ್ಕಳ ಕಾಯಿಲೆಗಳ ಸಮಗ್ರ ನಿರ್ವಹಣಾ ಕಾರ್ಯಕ್ರಮ, ಅತಿಸಾರಭೇದಿ ನಿಯಂತ್ರಣ ಪಾಕ್ಷಿಕ ಆಚರಣೆ.

2. ನವಜಾತ ಮತ್ತ ಮಕ್ಕಳ ಖಾಯಿಲೆಗಳ ಸಮಗ್ರ ನಿರ್ವಹಣಾಕಾರ್ಯಕ್ರಮ (ಐ.ಎಂ.ಎನ್.ಸಿ.ಐ):

ನವಜಾತ ಶಿಶು ಹಾಗೂ ಮಕ್ಕಳಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಕಾಯಿಲೆಗಳಾದ ನ್ಯಮೋನಿಯಾ, ವಾಂತಿಬೇಧಿ, ಸೋಂಕು, ಅಪೌಷ್ಠಿಕತೆ ಇತ್ಯಾದಿಗಳಿಗೆ ಸೂಕ್ತ ಚಿಕಿತ್ಸೆಯನ್ನು ನೀಡುವ ಸಲುವಾಗಿ ನವಜಾತ ಮತ್ತು ಮಕ್ಕಳ ಖಾಯಿಲೆಗಳ ಸಮಗ್ರ ನಿರ್ವಹಣಾ ಕಾರ್ಯಕ್ರಮವನ್ನು 2005 ರಂದ ಜಾರಿಗೆ ತರಲಾಗಿದೆ. ಈ ಕಾರ್ಯಕ್ರಮದ ಮೂಲಕ ಶಿಶುಗಳೀಗೆ ಅಗತ್ಯ ಚಿಕಿತ್ಸೆಯನ್ನು ನೀಡುವುದ ಹಾಗೂ ಹೆಚ್ಚನ ಚಿಕಿತಸೆಯ ಅವಶ್ಯವಿದ್ದಲ್ಲಿ ಹೆಚ್ಚಿನ ಅವಶ್ಯ ಸಲಭ್ಯವುಳ್ಳ ಆಸ್ಪತ್ರೆಗಳಿಗೆ ನಿರ್ದೇಶಿಸಲಾಗುವುದು. ಈ ಕಾರ್ಯಕ್ರಮವನ್ನು ಮೊದಲ ಬಾರಿಗೆ 2005 ರಲ್ಲಿ ರಾಯಚೂರು ಜಿಲ್ಲೆಯಲ್ಲಿ ಪ್ರಾರಂಭಿಸಿ, ನಂತರ ಎಲ್ಲಾ ಜಿಲ್ಲೆಗಳಲ್ಲಿ ಅನುಷ್ಢಾನಗೊಳಿಸಲಾಗಿದೆ. 2011 ರಲ್ಲಿ ಎಫ್.ಆರ್.ಯು ಮತ್ತು ನವಜಾತ ಶಿಶು ಸ್ಥಿರೀಕರಣ ಘಟಕಗಳನ್ನು ನವಜಾತ ಶಿಶು ಮತ್ತು ಮಕ್ಕಳ ಖಾಯಿಲೆಗಳ ಸಮಗ್ರ ನಿರ್ವಹಣೆಯ ಕಾರ್ಯಕ್ರಮದ ಕಲ್ಪನೆಯಲ್ಲಿಯೇ ಸ್ಥಾಪಿಸಲಾಗಿರುವತ್ತದೆ. ಈ ಕೇಂದ್ರಗಳಲ್ಲಿ ವೈದ್ಯಾಧಿಕಾರಿಗಳು ಮತ್ತು ಶುಶ್ರೂಷಕರುಗಳನ್ನು ನೇಮಿಸುವುದರ ಮೂಲಕ ಅವರಿಗೆ ಸೂಕ್ತ ತರಬೇತಿಯನ್ನು ನೀಡುವುದರ ಮೂಲಕ ಉತ್ತಮ ಚಿಕಿತ್ಸೆಯನ್ನು ನೀಡಲಾಗುತ್ತಿದೆ.

 1. ಗೃಹ ಆಧಾರಿತ ನವಜಾತ ಶಿಶು ಆರೈಕೆ (ಹೆಚ್.ಬಿ.ಎನ್.ಸಿ):

ಹೆರಿಗೆ ನಂತರ ಹಾಗೂ ಚಿಕಿತ್ಸೆಯ ನಂತರ ವಿಶೇಷ ನವಜಾತ ಶಿಶು ಆರೈಕೆ ಘಟಕದಿಂದ ಬಿಡುಗಡೆಹೊಂದಿದ ನವಜಾತ ಶಿಶುಗಳ ಆರೋಗ್ಯದ ಮೇಲೆ ನಿಗಾ ಇಡುವ ದೃಷ್ಠಯಿಂದ ಆಶಾ ಕಾರ್ಯಕರ್ತೆಯರು ನವಜಾತ ಶಿಶು ಇರುವ ಮನೆಗಳಿಗೆ 42 ದಿನಗಳ ಒಳಗೆ ಕನಿಷ್ಠ ಆರು ಬಾರಿಯಾದರೂ ಬೇಟಿ ನೀಡಿ ಶಿಶುವಿನ ಆರೋಗ್ಯದ ಬಗ್ಗೆ ಮಾಹಿತಿ ಸಂಗ್ರಹಿಸಿ ಹೆಚ್ಚಿನ ಚಿಕಿತ್ಸೆಯ ಅಗತ್ಯವಿದ್ದಲ್ಲಿ ಆರೋಗ್ಯ ಕೇಂದ್ರಕ್ಕೆ ಕರೆತಂದು ಚಿಕಿತ್ಸೆಯನ್ನು ಕೊಡಿಸುತ್ತಾರೆ. ರಾಜ್ಯದಲ್ಲಿ ಸುಮಾರು 41236 ಆಶಾ ಕಾರ್ಯಕರ್ತೆಯರು ಕಾರ್ಯನಿರ್ವಹಿಸುತ್ತಿದ್ದು, ಪ್ರತಿ ಬೇಟಿಯಲ್ಲಿ ಮಗುವಿನ ತೂಕ ಮಾಡುವುದು ಕೈಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವ ಬಗ್ಗೆ (ಕೈ ತೊಳೆಯುವ ಬಗ್ಗೆ) ತಾಯಂದಿರಿಗೆ ತಿಳಿಸುವುದು ಎದೆ ಹಾಲಿನ ಬಗ್ಗೆ ಯಾಯಂದಿರೊಂದಿಗೆ ಸಮಾಲೋಚನೆ ನಡೆಸುವುದು. ನವಜಾತ ಶಿಶುವಿನ ಆರೋಗ್ಯದಲ್ಲಿ ನ್ಯೂನತೆ ಕಾಣಿಸಿದ್ದಲ್ಲಿ ಆ ಮಗುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸುವುದು, ಇತ್ಯಾದಿ ಕರ್ತವ್ಯ ನಿರ್ವಹಿಸುತ್ತಾರೆ. ಇವರಿಗೆ ಪ್ರತಿ ಮನೆ ಬೇಟಿಗೆ ರೂ. 50/- ಗಳನ್ನು ನೀಡಲಾಗುತ್ತದೆ. ಆಶಾ ಕಾರ್ಯಕರ್ತೆಯರಿಗೆ ಎಲ್ಲಾ ಆರೋಗ್ಯ ಕಾರ್ಯಕ್ರಮಗಳ ಜೊತೆಗೆ ಆರ್.ಎಂ.ಎನ್.ಸಿ.ಎ.ಹೆಚ್+ಎನ್ ಕೌಶಲ್ಯಗಳ ಕುರಿತು ತರಬೇತಿಯನ್ನು ಸಾಟ್ ಕಾಮ್ ಮೂಲಕ ನೀಡಲಾಗುತ್ತೆ.

 1. ಜನನಿ ಶಿಶು ಸುರಕ್ಷಾ ಕಾರ್ಯಕ್ರಮ (ಜಿ.ಎಸ್.ಎಸ್.ಕೆ):

ಜನನಿ ಶಿಶು ಸುರಕ್ಷಾ ಕಾರ್ಯಕ್ರಮವನ್ನು 2012 ಜಾರಿಗೆ ತರಲಾಗಿದ್ದು, ರೋಗಗ್ರಸ್ತ ನವಜಾತ ಶಿಶುವಿಗೆ ನೀಡಲಾಗುವ ಚಿಕಿತ್ಸೆಯ ಚಿಕಿತ್ಸಾ ವಿಚ್ಚವನ್ನು ತಗ್ಗಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಜಾರಿಗೆ ತರಲಾಯಿತು. ಈ ಕಾರ್ಯಕ್ಮದ ಮೂಲಕ ಶಿಶುವಿನ ಚಿಕಿಸ್ತೆಗೆ ತಗಲುವ ವೆಚ್ಚವನ್ನು ಸರ್ಕಾರದಿಂದಲೇ ಭರಿಸಲಾಗುವುದು. ಪ್ರಯೋಗಾಲಯ ಸೇವೆಗಳಿಗೆ ರೂ. 100.00 ಔಷದೋಪಚಾರಕ್ಕೆ ರೂ. 200.00 ಮತ್ತು ರೂ. 300.00 ಗಳನ್ನು ಮಗುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಹಾಗೂ ಮನೆಗೆ ಸಾಗಿಸಲು ಸಾರಿಗೆ ವೆಚ್ಚಕ್ಕಾಗಿ ನಿಗಧಿಪಡಿಲಸಾಗಿರುತ್ತದೆ. ಆದರೆ ಮಗುವಿಗೆ ಹಿಚ್ಚಿನ ಸೌಲಭ್ಯಗಳ ಅವಶ್ಯಕತೆ ಇದ್ದಲ್ಲಿ ಅವಶ್ಯಕತೆಗೆ ಅನುಗುಣವಾಗಿ ಅನುದಾನವನ್ನು ಬಳಕೆ ಮಾಡಬಹುದಾಗಿದೆ.

 1. ಶಿಶು ಮರಣ ಪರಿಶೀಲನೆ (ಸಿ.ಡಿ.ಆರ್):

ಶಿಶು ಮರಣ ಪರಶೀಲನೆಯನ್ನು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಲಿ ಜಾರಿಗೆ ತರಲಾಗಿದೆ. ಭಾರತ ಸರ್ಕಾರದ ಮಾರ್ಗಸೂಚಿಯನ್ವಯ ಶಿಶುಮರಣ ಪರಿಶೀಲನೆಯನ್ನು ನಡೆಸಲು ಜಿಲ್ಲಾ ಹಾಗೂ ರಾಜ್ಯ ಮಟ್ಟದ ಸಮಿತಿಯನ್ನು ಮಾಡಲಾಗಿದೆ. ಈ ಬಗ್ಗೆ ಅಕ್ಟೋಬರ್ 2015 ರಲ್ಲಿ ತರಬೇತಿಯನ್ನು ನೀಡಲಾಯಿತು. ಶಿಶು ಮರಣ ಪರಿಶೀಲನೆ ನಡೆಸಲು ಜಿಲ್ಲಾಮಟ್ಟದಲ್ಲಿ ಸಾಂಸ್ಥಕ ಆಧಾರಿತ ಶಿಶುಮರಣ ಪರಿಶೀಲನೆ ಮತ್ತು ಸಮುದಾಯ ಆಧಾರಿತ ಶಿಶುಮರಣ ಪರಿಶೀಲನಾ ಸಮಿತಿಯನ್ನು ರಚಿಸುವುದರ ಮೂಲಕ ಶಿಶುಮರಣ ಪರಿಶೀಲನೆಯನ್ನು ನಡೆಸಿ ಕಾರಣವಾದ ಅಂಶವನ್ನು ಗುರುತಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಾಗುತ್ತಿದೆ.

 1. ಅತಿಸಾರಭೇದಿ ನಿಯಂತ್ರಣ ಪಾಕ್ಷಿಕ (ಐ.ಡಿ.ಸಿ.ಎಫ್):

ಮಾನ್ಸೂನ್ ಮಾರುತಗಳನ್ನು ಗಮನದಲ್ಲಿರಿಸಿಕೊಂಡು ಮೇ ಮತ್ತು ಜೂನ್ ಮಾಹೆಯ ಅವಧಿಯಲ್ಲಿ ಅತಿಸಾರಭೇದಿ ನಿಯಂತ್ರಣ ಪಾಕ್ಷಿಕವನ್ನು ಆಚರಿಸಲಾಗುತ್ತಿದೆ. ಈ ಸಮಯದಲ್ಲಿ ಓ.ಆರ್.ಎಸ್. ಮತ್ತು ಝಿಂಕ್ ಔಷಧಿಗಳ ವಿತರಣೆ ಹಾಗೂ ಚಿಕಿತ್ಸೆ ನೀಡುವುದು. ಪಾಕ್ಷಿಕ ಆಚರಣೆಯಲ್ಲಿ ಗ್ರಾಮ ಮಟ್ಟದಲ್ಲಿನ ಮುಂಚೂಣಿ ನೌಕರರುಗಳಾದ ಆಶಾ ಕಾರ್ಯಕರ್ತೆಯರು, ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು, ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸುತ್ತಾರೆ. ಆಶಾ ಕಾರ್ಯಕರ್ತೆಯುರು 5 ವರ್ಷದೊಳಗಿನ ಮಗು ಇರುವ ಎಲ್ಲಾ ಮನೆಗಳಿಗೂ ಭೇಟಿ ನೀಡಿ, ಓ.ಆರ್.ಎಸ್. ಅನ್ನು ನೀಡಿ, ದ್ರಾವಣ ತಯಾರಿಸುವ ವಿಧಾನ, ಅತಿಸಾರಭೇದಿಯ ಸಂದರ್ಭದಲ್ಲಿ ಮಗುವಿನ ಆಹಾರ ಸೇವನೆ ಮತ್ತು ಶೌಚಾಲಯ ಬಳಕೆ, ಶುಚಿತ್ವ ಕಾಪಾಡುವುದ ಇತ್ಯಾದಿಗಳ ಬಗ್ಗೆ ತಾಯಂದಿರಿಗೆ ದೀರ್ಘವಾದ ತಿಳುವಳಿಕೆಯನ್ನು ನೀಡುತ್ತಾರೆ.

 1. ನವಜಾತ ಶಿಶುವಾರ:

ನವಜಾತ ಶಿಶ ಮರಣವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ನವಜಾತ ಶಿಶುವಾರವನ್ನು 2016ರಿಂದ ಆಚರಿಸಲಾಗುತ್ತಿದೆ. ನವಜಾತ ಶಿಶುವಾರ ಕಾರ್ಯಕ್ರಮಕ್ಕೆ ಭಾರತ ಸರ್ಕಾರ ಮತ್ತು ಕರ್ನಾಟಕ ಸರ್ಕಾರ ಮಹತ್ವವನ್ನು ನೀಡುವುದರ ಮೂಲಕ ನವಜಾತ ಶಿಶು ಆರೈಕೆಯಲ್ಲಿ ಗುಣಮಟ್ಟ ಕಾಪಾಡಿಕೊಳ್ಳಲಾಗುತ್ತಿದೆ. ಪ್ರತಿ ವರ್ಷದ ನವೆಂಬರ್ 2ನೇ ವಾರವನ್ನು ನವಜಾತ ಶಿಶುವಾರವೆಂದು ಪರಿಗಣಿಸಿ ರಾಜ್ಯದಾದ್ಯಂತ ಎಲ್ಲಾ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಆಚರಿಸಲಾಗುತ್ತಿದೆ. ಈ ಸಮಯದಲ್ಲಿ ನವಜಾತ ಶಿಶು ಆರೈಕೆ ಲಸಿಕೆ ನೀಡುವುದ, ಎದೆ ಹಾಲುಣೀಸುವುದ ಇತ್ಯಾದಿಗಳ ಬಗ್ಗೆ ತಾಯಂದಿರಿಗೆ ಮಾಹಿತಿಯನ್ನು ನೀಡುವುದರ ಮೂಲಕ ತಿಳುವಳಿಕೆಯನ್ನು ನೀಡಲಾಗೂತ್ತದೆ.

 1. ಗೃಹ ಆಧಾರಿತ ಮಕ್ಕಳ ಆರೈಕೆ (ಹೆಚ್.ಬಿ.ವೈ.ಸಿ):

ಹೆಚ್.ಬಿ.ವೈಸಿ. ಕಾರ್ಯಕ್ರಮದಡಿ ನವಜಾತ ಶಿಶುಗಳನ್ನು 42 ದಿನಗಳವರೆಗೆ ಅನುಸರಿಸಲಾಗುತ್ತದೆ. ಆದರೆ ಮಗುವಿಗೆ 3 ತಿಂಗಳ ನಂತರ ಸ್ತನ್ಯಪಾನವನ್ನು ಸ್ಥಿಗಿತಗೊಳಿಸುವುದು, ವಿಳಂಬಗೊಳಿಸುವುದು ಅಥವಾ ಆರು ತಿಂಗಳ ಆಚೆಗೆ ಅಪೂರ್ಣ ಪೂರಕ ಆಹಾರವನ್ನು ನೀಡದಿರುವುದು, ನೈರ್ಮಲ್ಯ ಕಾಪಾಡಿಕೊಳ್ಳದಿರುವುದು, ಅನಾರೋಗ್ಯಕ್ಕೆ ಕಾರಣವಾಗಿರುತ್ತದೆ. ಈ ಅವಧಿಯಲ್ಲಿ ಮನೆಯಲ್ಲಿ ಮಕ್ಕಳ ಪಾಲನೆ ಪದ್ದತಿಗಳು ಸರಿಯಾಗಿ ಇಲ್ಲದ ಪಕ್ಷದಲ್ಲಿ ಸಹ ಮಗುವಿನ ಬೆಳವಣಿಗೆಗೆ ಕುಂಟಿತ ಕಾರಣವಾಗಬಹುದು ಆದ್ದರಿಂದ ಈ ಅಂಶಗಳೂ ದುಷ್ಪರಿಣಾಮವನ್ನು ಕಡಿಮೆ ಮಾಡಲು ಮತ್ತು ಪೌಷ್ಠಿಕಾಂಶ ಮತ್ತು ಬಾಲ್ಯದ ಬೆಳವಣಿಗೆಗೆ ಬೆಂಬಲವನ್ನು ಒದಗಿಸಲು, ರಾಷ್ಟ್ರೀಯ ಆರೋಗ್ಯ ಅಭಿಯಾನ ಮತ್ತು ಪೋಶನ್ ಅಭಿಯಾನದ ಭಾದವಾಗಿ ಮಕ್ಕಳ ಆರೈಕೆಗಾಗಿ ಹೆಚ್.ಬಿ.ವೈ.ಸಿ ಕಾರ್ಯಕ್ರಮವನ್ನು ಪ್ರಾರಂಭಿಸಲಾಗಿದೆ, ಇದರ ಅಡಿಯಲ್ಲಿ ಹೆಚ್ಚುವರಿ 5 ಭೇಟಿಗಳನ್ನು 3,6,9,12 ಮತ್ತು 15 ನೇ ತಿಂಗಳಿನಲ್ಲಿ ಆಶಾ ಕಾರ್ಯಕರ್ತರು ಮಾಡುತ್ತಾರೆ. ಆಶಾ ಕಾರ್ಯಕರ್ತೆಯರು 19 ಪೋಶನ್ ಜಿಲ್ಲೆಗಳಲ್ಲಿ (2ಆಸ್ಪಿರೇಷನ್ ಜಿಲ್ಲೆಗಳು ಸೇರಿದಂತೆ) ಹೆಚ್.ಬಿ.ವೈ.ಸಿ ತರಬೇತುದಾರರ ತರಬೇತಿ ಪೂರ್ಣಗೊಂಡಿದ್ದು ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಆಶಾಮ ಎ.ಎಫ್ ಮತ್ತು ಎ.ಎನ್.ಎಂ ನಂತಹ ಮುಂಚೂಣಿ ಕಾರ್ಮಿಕರ ತರಬೇತಿಯನ್ನು ನಡೆಸಲಾಗುತ್ತಿದೆ.

 1. ನ್ಯುಮೋನಿಯಾವನ್ನು ಯಶಸ್ವಿಯಾಗಿ ನಿವಾರಣೆ ಮಾಡಲು ಸಾಮಾಜಿಕ ಜಾಗರೂಕರಣ ಮತ್ತು ಕ್ರಯಾತ್ಮಕ ಚಟುವಟಿಕೆಗಳು (ಎಸ್.ಎ.ಎ.ಎನ್.ಎಸ್):

ಬಾಲ್ಯದಲ್ಲಿ ನ್ಯಮೋನಿಯಾವು ಆರೋಗ್ಯಕ್ಕೆ ಸಂಬಂಧಿಸಿದಂತೆ ಅನೇಕ ಅಪಾಯಕಾರಿ ಅಂಶಗಳ ಸಂಯೋಜನೆಯಿಂದ ಉಂಟ್ಟಾಗುತ್ತವೆ ಉದಾಹರಣ: ಕಲುಶಿತ ಗಾಳಿ ನೀರು, ಬ್ಯಾಕ್ಟೀರಿಯ, ವೈರಸ್ ಮುಂತಾದವುಗಳು. ಕಡಿಮೆ ಹುಟ್ಟು ತೂಕ ಅಪೌಷ್ಟಿಕತೆ, ಮೊದಲ 6 ತಿಂಗಳ ವರೆಗೆ ಮುಕ್ತ ಸ್ತನಪಾನ ಪಾಲಿಸದೆ ಇರುವುದ, ಒಳಾಂಗಣ ವಾಯು ವಾಲಿನ್ಯ, ರೋಗ ನಿರೋಧಕ ಶಕ್ತಿಯ ಕೊರತೆ, ನೈರ್ಮಲ್ಯದ ಕೊರತೆ ಹಾಗೂ ಇತರ ಅನೇಕ ಸಾಮಾಜಿಕ ಆರ್ಧಿಕ ಅಂಶಗಳು ಮಕ್ಕಳಲ್ಲಿ ನ್ಯಮೋನಿಯ ಕಾಯಿಲೆಗೆ ಕಾರಣವಾಗಿರುತ್ತವೆ. 5 ವರ್ಷದೊಳಗಿನ ಮಕ್ಕಳ ಮರಣಕ್ಕೆ ನ್ಯುಮೋನಿಯ ಪ್ರಮುಖ ಕಾರಣಗಳಲ್ಲಿ ಒಂದಾಗಿದ್ದು ಭಾರತದಲ್ಲಿ ಶೇ.15 ರಷ್ಟು ಮಕ್ಕಳ ಮರಣ ನ್ಯುಮೋನಿಯದಿಂದ ಉಂಟಾಗುತ್ತಿದೆ. ದೇಶದಲ್ಲಿ ವಾರ್ಷಿಕವಾಗಿ ನ್ಯಮೋನಿಯಾದಿಂದ ಸುಮಾರು 1.4 ಲಕ್ಷ ಮಕ್ಕಳು ಸಾವನಪ್ಪುತ್ತಿದ್ದಾರೆ.  2020 ರ ನವೆಂಬರ್ ತಿಂಗಳಲ್ಲಿ ಸಾಂಸ್ ಕಾರ್ಯಕ್ರಮವನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸಲು ರಾಜ್ಯ ಮಟ್ಟದ ಟಿ.ಒ.ಟಿ ತರಬೇತಿಯನ್ನು ನೀಡಲಾಯಿತು ಹಾಗೂ ಜಿಲ್ಲಾ ಮಟ್ಟದ ತರಬೇತಿಗಳು ಪ್ರಗತಿಯಲ್ಲಿದೆ.

 Guidelines, Circulars, Orders, OMs:

ಕ್ರ.ಸಂ. ವಿಷಯ ಬಿಡುಗಡೆಯ ದಿನಾಂಕ ಬಾಷೆ ಮೂಲ ಆಧಾರ ದಾಖಲಾತಿಯ ಅಳತೆ ವೀಕ್ಷಿಸಿಲು / ಡೌನ್ ಲೋಡ್ ಮಾಡಲು
1 ಎಫ್.ಬಿ.ಎನ್.ಸಿ ಮಾರ್ಗಸೂಚಿ ಗಳು 22/06/20 ಇಂಗ್ಲೀಷ್ - 2.30 MB  FBNC
2 ಮಾನವ ಸಂಪನ್ಮೂಲ ಮಾರ್ಗಸೂಚಿಗಳು 21/08/2020 ಕನ್ನಡ - 6.04 MB  HR
3

ಎನ್.ಬಿ.ಎಸ್.ಯು ಮತ್ತು ಎನ್.ಬಿ.ಸಿ.ಸಿ ಮಾರ್ಗಸೂಚಿಗಳು 2020-21

25/03/2020 ಇಂಗ್ಲೀಷ್ - 2.97 MB NBSU_NBCC
4 ವಿಶ್ಚ ತಾಯಿಯ ಎದೆಹಾಲುಣಿಸುವ ವಾರ – ಮಾರ್ಗಸೂಚಿಗಳು 2020-21 29/07/2020 ಇಂಗ್ಲೀಷ್ - 1.45 MB  WBW
5 ಸಿ.ಡಿ.ಆರ್.ಮಾರ್ಗಸೂಚಿಗಳು 2020-21 22/06/2020 ಕನ್ನಡ - 2.18 MB CDR
6 ಐ.ಎಂ.ಎನ್.ಸಿ.ಐ ಮಾರ್ಗಸೂಚಿಗಳು 2020-21 22/06/2020 ಕನ್ನಡ - 1.04 MB IMNCI

 

 

ಇತ್ತೀಚಿನ ನವೀಕರಣ​ : 19-05-2021 12:06 PM ಅನುಮೋದಕರು: MD NHM


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ರಾಷ್ಟ್ರೀಯ ಆರೋಗ್ಯ ಅಭಿಯಾನ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080