ಅಭಿಪ್ರಾಯ / ಸಲಹೆಗಳು

ಗರ್ಭಪೂರ್ವ ಮತ್ತು ಪ್ರಸವಪೂರ್ವ ಪತ್ತೆ ತಂತ್ರವಿಧಾನಗಳು (ಲಿಂಗ ಆಯ್ಕೆ ನಿಷೇಧ ಕಾಯ್ದೆ-1994)

ರಾಜ್ಯ​ ಗ.ಧಾ.ಪೂ & ಪ್ರ.ಪೂ.ವ.ತಂ. ಕೋಶ(STATE PC & PNDT CELL) 

 

ಪಿ.ಸಿ & ಪಿಎನ್ ಡಿಟಿ ಕಾಯ್ದೆ - ಪರಿಚಯ

ಒಂದು ಸ್ವಸ್ಥ ಸಾಮಾಜಿಕ ಆರೋಗ್ಯವು ಯಾವುದೇ ರಾಜ್ಯ ಅಥವಾ ರಾಷ್ಟ್ರದ ಆರೋಗ್ಯಕರವಾಗಿರಲು ಕಾರಣವಾಗುವ ಸುಸ್ಥಿರ ಸಾಮಾಜಿಕ ಅಭಿವೃದ್ಧಿಯ ಆಧಾರಸ್ಥಂಭ. ಜನಸಂಖ್ಯೆಯೊಂದರಲ್ಲಿ  ಲಿಂಗಾನುಪಾತ ಎಂಬುದು ಪ್ರತಿ 1000 ಪುರುಷರ ಸಂಖ್ಯೆಗೆ ಇರುವ ಸ್ತ್ರೀಯರ ಸಂಖ್ಯೆಯನ್ನು ತಿಳಿಸುವ ಒಂದು ಮಾಪನ.  ಮಕ್ಕಳ ಲಿಂಗಾನುಪಾತವು 0-6 ವರ್ಷ ವಯೋಮಾನದ ಹುಡುಗಿ, ಹುಡುಗರ ಸಂಖ್ಯಾನುಪಾತವನ್ನು ವಿವರಿಸುತ್ತದೆ. ಸಾಮಾಜಿಕ ಆರೋಗ್ಯವನ್ನು ಖಚಿತಪಡಿಸಿಕೊಳ್ಳಲು ಜನಸಂಖ್ಯೆಯೊಂದರಲ್ಲಿನ ಲಿಂಗಾನುಪಾತವನ್ನು ಒಂದು ಪ್ರಬಲ ಮಾಪನವಾಗಿ ಬಳಸಲಾಗುತ್ತದೆ. ಹೆಣ್ಣು ಮತ್ತು ಗಂಡು ಸಮಾನ ಸ್ಥಾನಮಾನವನ್ನು ಅನುಭವಿಸುವ ಅಭಿವೃದ್ಧಿ ಹೊಂದಿದ ಸಮಾಜಗಳಲ್ಲಿ, ಸ್ತ್ರೀಯರು ಸಾಮಾನ್ಯವಾಗಿ ಪುರುಷರಿಗಿಂತ ಹೆಚ್ಚು ಸಂಖ್ಯೆಯಲ್ಲಿರುತ್ತಾರೆ. ಪ್ರತಿಕೂಲ ಲಿಂಗಾನುಪಾತವು (ಹೆಣ್ಣು ಸಂಖ್ಯೆ ಗಂಡಿಗಿಂತ ಕಡಿಮೆ ಇರುವಲ್ಲಿ) ಕ್ಷೀಣವಾದ ಸಾಮಾಜಿಕ ಆರೋಗ್ಯವನ್ನು ಬಿಂಬಿಸುತ್ತದೆಯಷ್ಟೇ ಅಲ್ಲದೆ, ಸುಸ್ಥಿರ ಸಾಮಾಜಿಕ ಅಭಿವೃದ್ಧಿಯನ್ನು ಹೊಂದುವಲ್ಲಿ ಅಡಚಣೆಯೂ ಆಗಿರುತ್ತದೆ.  1991ರಲ್ಲಿ, ಬೆಂಗಳೂರಿನ ಮಕ್ಕಳ ಲಿಂಗಾನುಪಾತವು 950 ಇತ್ತು ಹಾಗೂ 2011 ಜನಗಣತಿ ಪ್ರಕಾರ 943 ಆಗಿತ್ತು. ರಾಷ್ಟ್ರೀಯ ಸರಾಸರಿಗೆ ಹೋಲಿಸಿದರೆ ರಾಜ್ಯದ ಒಟ್ಟಾರೆ ಲಿಂಗಾನುಪಾತವು ಚೆನ್ನಾಗಿದ್ದರೂ, ಜಿಲ್ಲೆಗಳ ನಡುವೆ ಇರುವ ವ್ಯತ್ಯಾಸಗಳು, ಲಿಂಗ ಆಯ್ಕೆಗಾಗಿ ವರ್ಜನೆಗಳು ಪ್ರಚಲಿತದಲ್ಲಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಕುಟುಂಬವು ಗಂಡಿನಿಂದಲೇ ಮುಂದುವರೆಯುತ್ತದೆ ಎಂಬ ಆಧಾರದ ಮೇಲೆ ಹುಟ್ಟುಹಾಕಿರುವ ಬಹುಮಟ್ಟಿಗಿನ ಪಿತೃಪ್ರಧಾನತೆ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ಧಾರ್ಮಿಕ ವ್ಯವಸ್ಥೆಯು ಭಾರತದಲ್ಲಿ ಸ್ತ್ರೀಯರ ಎರಡನೇ ದರ್ಜೆಯ ಸ್ಥಾನಮಾನಕ್ಕೆ ಕಾರಣವಾಗಿದೆ.  ಇದು ಕುಟುಂಬದಲ್ಲಿ ಹೆಣ್ಣು ಮಗುವಿನ ಜನನವನ್ನು ತಪ್ಪಿಸುವ ಉತ್ಕಟ ಬಯಕೆಗೆ ದಾರಿಮಾಡಿಕೊಟ್ಟಿದ್ದು, ಮಗುಗಳ ಲಿಂಗಾನುಪಾತವು ಅಪಾಯಕಾರಿಯಾಗಿ ಇಳಿಮುಖವಾಗಲು ದಾರಿ ಮಾಡಿಕೊಟ್ಟಿದೆ. ತಂತ್ರಜ್ಞಾನದ ದುರ್ಬಳಕೆಯು ಮಗುಗಳ ಲಿಂಗಾನುಪಾತವನ್ನು ವಿಕೃತಗೊಳಿಸುವಲ್ಲಿ ಮಹತ್ತರ ಕಾರಣವಾಗಿದೆ. ತಂತ್ರಜ್ಞಾನದ ಬಳಕೆಯನ್ನು ನಿಯಂತ್ರಿಸಲು, ದುರ್ಬಳಕೆಯನ್ನು ಹತ್ತಿಕ್ಕಲು, 1994ರಲ್ಲಿ ಜಾರಿಗೆ ತಂದ 2003ರಲ್ಲಿ ತಿದ್ದುಪಡಿ ಮಾಡಿ ಗರ್ಭಧಾರಣಾಪೂರ್ವ ಮತ್ತು ಪ್ರಸವಪೂರ್ವ ವರ್ಗೀಕರಣ ತಂತ್ರಗಳು (ಪಿಸಿ & ಪಿಎನ್ ಡಿಟಿ) ಅಧಿನಿಯಮವು ಲಿಂಗ ಆಯ್ಕೆ ವರ್ಜನೆಗಳನ್ನು ತಪ್ಪಿಸಲು ಒಂದು ಪ್ರಮುಖ ಉಪಕರಣವಾಗಿದೆ. ಅಧಿನಿಯಮವು ವರ್ಗೀಕರಣ ತಂತ್ರಗಳ ಬಳಕೆಯನ್ನು ಗರ್ಭಧಾರಣೆಯ ಮೊದಲು ಅಥವಾ ನಂತರ ಲಿಂಗ ನಿರ್ಣಯ ಮಾಡುವ ಮೂಲಕವಾಗಿ ಲಿಂಗದ ಆಯ್ಕೆ ಮಾಡಿ  ಭ್ರೂಣ ಹತ್ಯೆಗೆ ದಾರಿಮಾಡಿಕೊಡುವುದನ್ನು ನಿಷೇಧಿಸಲು ಹಾಗೂ ನಿಯಂತ್ರಿಸುವ ಮುಖ್ಯ ಉದ್ದೇಶ ಹೊಂದಿದೆ. ಅಧಿನಿಯಮದ ಅಂಶಗಳಲ್ಲಿ ಲಿಂಗದ ಆಯ್ಕೆಯನ್ನು ನಿಷೇಧಿಸಲು ಸಾಂಸ್ಥಿಕ ತಾಂತ್ರಿಕತೆಗಳನ್ನು ರೂಪಿಸುವ ಹಾಗೂ ವರ್ಗೀಕರಣ ತಂತ್ರಗಳ ಬಳಕೆಯನ್ನು ಉಸ್ತುವಾರಿ ಮಾಡಲು ಉಪಕರಣಗಳನ್ನು ಒದಗಿಸುವುದನ್ನು ಒಳಗೊಂಡಿದೆ. ಪಿಸಿ & ಪಿಎನ್ ಡಿಟಿ ಅಧಿನಿಯಮದ ಅಂಶಗಳನ್ನು ಉಲ್ಲಂಘಿಸುವವರಿಗೆ ಶಿಕ್ಷೆ ಹಾಗೂ ದಂಡಗಳಿಗೂ ಅವಕಾಶ ಕಲ್ಪಿಸಲಾಗಿದೆ.
ರಾಜ್ಯದಲ್ಲಿ ಪಿಸಿ&ಪಿಎನ್ ಡಿಟಿ ಅಧಿನಿಯಮವನ್ನು ಅನುಷ್ಠಾನಗೊಳಿಸುವ ಉಸ್ತುವಾರಿಯನ್ನು ಕಾಯ್ದುಕೊಳ್ಳುವ ಸಲುವಾಗಿ ಸಾಂಸ್ಥಿಕ ತಾಂತ್ರಿಕತೆಯೊಂದನ್ನು ಸ್ಥಾಪಿಸಲಾಗಿದೆ. ರಾಜ್ಯ ಮೇಲುಸ್ತುವಾರಿ ಅಂಗವನ್ನು, ರಾಜ್ಯ ಮತ್ತು ಜಿಲ್ಲಾಮಟ್ಟದ ಸೂಕ್ತ ಪ್ರಾಧಿಕಾರಗಳು ಮತ್ತು ಸಲಹಾ ಸಮಿತಿಗಳನ್ನು ರಚಿಸಲಾಗಿರುತ್ತದೆ.  ಇಷ್ಟೇ ಅಲ್ಲದೆ, ಅಧಿನಿಯಮದ ಅಂಶಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಪ್ರಕ್ರಿಯೆಗಳನ್ನು ತೀವ್ರಗೊಳಿಸಲು ರಾಜ್ಯ ಮತ್ತು ಜಿಲ್ಲಾಮಟ್ಟದ ಕಾರ್ಯಪಡೆಗಳನ್ನು ರಚಿಸಲಾಗಿದೆ.​

ಪಿಸಿ & ಪಿಎನ್ ಡಿಟಿ ಕೋಶ ಮತ್ತು ಅಧಿನಿಯಮ

ಪಿಸಿ & ಪಿಎನ್ ಡಿಟಿ ಅಧಿನಿಯಮ
ಹೆಣ್ಣು ಭ್ರೂಣಹತ್ಯೆಯನ್ನು ತಡೆಗಟ್ಟಲು ಮತ್ತು ಭಾರತದಲ್ಲಿ ಇಳಿಮುಖವಾಗುತ್ತಿರುವ ಲಿಂಗಾನುಪಾತವನ್ನು ತಡೆಗಟ್ಟಲು ಗರ್ಭಧಾರಣೆಪೂರ್ವ ಮತ್ತು ಪ್ರಸವಪೂರ್ವ ವರ್ಗೀಕರಣ ತಂತ್ರಗಳು (ಪಿಸಿ&ಪಿಎನ್ ಡಿಟಿ) ಅಧಿನಿಯಮ, 1994 ಎಂಬ ಭಾರತದ ಸಂಸತ್ತು ಹೊರಡಿಸಿದ ಅಧಿನಿಯಮವಾಗಿದೆ. ಪ್ರಸವಪೂರ್ವ ಲಿಂಗ ನಿರ್ಧರಣೆಯನ್ನು ಅಧಿನಿಯಮವು ನಿಷೇಧಿಸಿದೆ. 
ಅಧಿನಿಯಮದ ಪ್ರಮುಖ ಉದ್ದೇಶವೆಂದರೆ ಗರ್ಭಧಾರಣೆಯ ನಂತರ ಅಥವಾ ಮೊದಲು ಲಿಂಗ ಆಯ್ಕೆಯ ಬಳಕೆಯನ್ನು ನಿಷೇಧಿಸುವುದು ಮತ್ತು ಲಿಂಗ ಆಯ್ಕೆಯಿಂದ ಗರ್ಭಪಾತ ಮಾಡಿಸಿಕೊಳ್ಳುವ ಪ್ರಸವಪೂರ್ವ ವರ್ಗೀಕರಣ ತಂತ್ರದ ದುರ್ಬಳಕೆಯನ್ನು ನಿವಾರಿಸುವುದಾಗಿದೆ.

ಈ ಅಧಿನಿಯಮದ ಅಡಿಯಲ್ಲಿ ಅಪರಾಧಗಳೆಂದರೆ ನೋಂದಣಿಯಾಗಿರದ ಘಟಕಗಳಲ್ಲಿ ಪ್ರಸವಪೂರ್ವ ವರ್ಗೀಕರಣ ತಂತ್ರವನ್ನು ಪ್ರಯೋಗಿಸುವುದು ಅಥವಾ ಪ್ರಯೋಗಿಸಲು ಸಹಾಯಕವಾಗುವುದು, ಪುರುಷ ಅಥವಾ ಸ್ತ್ರೀಯ ಮೇಲೆ ಲಿಂಗ ಆಯ್ಕೆ ಮಾಡುವುದು, ಅಧಿನಿಯಮದಲ್ಲಿ ನಮೂದಿಸಿಲ್ಲದ ಯಾವುದೇ ಇತರ ಉದ್ದೇಶಗಳಿಗೆ ಪಿಎನ್ ಡಿ ತಪಾಸಣೆ ನಡೆಸುವುದು, ಭ್ರೂಣದ ಲಿಂಗವನ್ನು ಕಂಡುಹಿಡಿಯುವ ಸಾಮರ್ಥ್ಯವುಳ್ಳ ಯಾವುದೇ ಅಲ್ಟ್ರಾಸೌಂಡ್ ಯಂತ್ರ ಅಥವಾ ಇನ್ಯಾವುದೇ ಅಂತಹ ಉಪಕರಣಗಳ ಮಾರಾಟ, ಹಂಚಿಕೆ, ಸರಬರಾಜು, ಬಾಡಿಗೆ, ಇತ್ಯಾದಿಯಲ್ಲಿ ತೊಡಗಿರುವುದು.

ಈ ಅಧಿನಿಯಮದ ಪ್ರಮುಖ ಅಂಶಗಳೆಂದರೆ :

1.      ಗರ್ಭಧಾರಣೆ ಮುನ್ನ ಅಥವಾ ನಂತರ ಲಿಂಗ ಆಯ್ಕೆಯ ನಿಷೇಧಕ್ಕೆ ಕಾಯ್ದೆಯು ಅವಕಾಶ ಕಲ್ಪಿಸಿದೆ.

2.     ಅಲ್ಟ್ರಾಸೌಂಡ್ ಹಾಗೂ ಆ್ಯಮ್ನಿಯೋಸೆಂಟೆಸಿಸ್ ಮುಂತಾದ ಪ್ರಸವಪೂರ್ವ ವರ್ಗೀಕರಣ ತಂತ್ರಗಳನ್ನು ಬಳಸುವ ಅಥವಾ ಬಳಕೆಗೆ ಅನುವು ಮಾಡಿಕೊಡುವ

ಅ) ಆನುವಂಶಿಕ ವೈಚಿತ್ರ್ಯಗಳು

ಆ) ಚಯಾಪಚಯದ ಅಸ್ವಸ್ಥ್ಯತೆ

ಇ) ವರ್ಣತಂತುಗಳ ವೈಚಿತ್ರ್ಯಗಳು

ಈ) ಕೆಲವು ಜನ್ಮಜಾತ ಅವರೂಪಗಳು

ಉ) ಹೀಮೋಗ್ಲೋಬಿನೋಪತಿಗಳು

ಊ) ಲಿಂಗ ಸಂಬಂಧಿತ ಅಸ್ವಸ್ಥ್ಯತೆ

ಇವೆಲ್ಲವುಗಳನ್ನು ನಿಯಂತ್ರಿಸುತ್ತದೆ:   
3. ಭ್ರೂಣದ ಲಿಂಗ ನಿರ್ಧರಣೆಯ ಉದ್ದೇಶಕ್ಕಾಗಿ ಅಲ್ಟ್ರಾಸೋನೊಗ್ರಫಿಯೂ ಸೇರಿದಂತೆ ಇನ್ಯಾವುದೇ ತಪಾಸಣೆಯನ್ನು ಯಾವ ಪ್ರಯೋಗಾಲಯ ಅಥವಾ ಕೇಂದ್ರ ಅಥವಾ ಕ್ಲಿನಿಕ್ ಕೈಗೊಳ್ಳಬಾರದು.

4. ಕಾನೂನಿನನ್ವಯ ವಿಧಾನವನ್ನು ಅನುಸರಿಸುತ್ತಿರುವ ವ್ಯಕ್ತಿ ಅಥವಾ ಅಂತಹ ಯಾವುದೇ ವ್ಯಕ್ತಿಯು ಗರ್ಭಿಣಿ ಸ್ತ್ರೀಗೆ ಅಥವಾ ಅವರ ಸಂಬಂಧಿಕರುಗಳಿಗೆ ಪದಗಳಿಂದಾಗಲೀ, ಸಂಕೇತಗಳಿಂದಾಗಲಿ ಅಥವಾ ಇನ್ಯಾವುದೇ ಪದ್ಧತಿಯ ಮುಖಾಂತರವಾಗಲೀ ಭ್ರೂಣದ ಲಿಂಗ ರೀತಿಯನ್ನು ಸಂವಹನ ಮಾಡಬಾರದು,

5. ಸೂಚನೆ, ಸುತ್ತೋಲೆ, ಗುರುತುಪಟ್ಟಿ, ಹೊರಹೊದ್ದಿಗೆ ಅಥವಾ ಇನ್ಯಾವುದೇ ದಾಖಲಿನ ಮೂಲಕವಾಗಲೀ, ವಿದ್ಯುನ್ಮಾನ ಅಥವಾ ಮುದ್ರಣ ರೂಪದ ಆಂತರಿಕ ಅಥವಾ ಇತರ ಮಾಧ್ಯಮಗಳ ಮೂಲಕ ಜಾಹೀರಾತು ಮಾಡುವುದಾಗಲಿ, ಭಿತ್ತಿಪತ್ರ, ಗೋಡೆ ಕಲೆ, ಸಂಕೇತ, ಬೆಳಕು, ಶಬ್ದ, ಹೊಗೆ ಅಥವಾ ಅನಿಲವೇ ಮುಂತಾದ ಯಾವುದೇ ರೀತಿಯಲ್ಲಿ ಯಾರೇ ವ್ಯಕ್ತಿಯು ಪ್ರಸವಪೂರ್ವ ಹಾಗೂ ಗರ್ಭಧಾರಣೆಪೂರ್ವ ಲಿಂಗ ನಿರ್ಧರಣೆಯ ಸೌಲಭ್ಯಗಳಿಗಾಗಿ ಜಾಹೀರಾತೊಂದನ್ನು ಹಾಕಿದರೆ, ಅವರನ್ನು ಮೂರು ವರ್ಷಗಳ ಕಾಲದವರೆಗೆ ಜೈಲು ಶಿಕ್ಷೆ ವಿಧಿಸಬಹುದು ಹಾಗೂ ₹. 10,000ರ ದಂಡ ವಿಧಿಸಬಹುದು.

ಕಡ್ಡಾಯ ನೋಂದಣಿ:

ಎಲ್ಲಾ ವರ್ಗೀಕರಣ ಪ್ರಯೋಗಾಲಯಗಳು, ಎಲ್ಲಾ ಆನುವಂಶಿಕ ಸಂಬಂಧೀ ಸಲಹೆ-ಸಮಾಲೋಚನಾ ಕೇಂದ್ರಗಳು, ಆನುವಂಶಿ ಸಂಬಂಧಿತ ಪ್ರಯೋಗಾಲಯಗಳು, ಆನುವಂಶಿ ಕ್ಲಿನಿಕ್ ಗಳ ಮತ್ತು ಅಲ್ಟ್ರಾಸೌಂಡ್ ಕ್ಲಿನಿಕ್ ಗಳ ಕಡ್ಡಾಯ ನೋಂದಣಿಗೆ ಅಧಿನಿಯಮವು ನಿರ್ದೇಶಿಸುತ್ತದೆ.

ಇಸವಿ 2003 ರಲ್ಲಿ ತಿದ್ದುಪಡಿ:

ಲಿಂಗ ಆಯ್ಕೆಯಲ್ಲಿ ಬಳಸಲಾಗುವ ತಂತ್ರಜ್ಞಾನದ ನಿಯಂತ್ರಣವನ್ನು ಉತ್ತಮಗೊಳಿಸಲು, 'ಪ್ರಸವಪೂರ್ವ ವರ್ಗೀಕರಣ ತಂತ್ರಗಳು (ದುರ್ಬಳಕೆಯ ನಿಯಂತ್ರಣ ಮತ್ತು ನಿವಾರಣೆ)ಅಧಿನಿಯಮ, 1994 (ಪಿಎನ್ ಡಿಟಿ)'ಯನ್ನು 'ಗರ್ಭಧಾರಣೆಪೂರ್ವ ಮತ್ತು ಪ್ರಸವಪೂರ್ಣ ವರ್ಗೀಕರಣ ತಂತ್ರಗಳು (ಲಿಂಗ ಆಯ್ಕೆ ನಿಷೇಧ) ಅಧಿನಿಯಮ (ಪಿಸಿಪಿಎನ್ ಡಿಟಿ ಕಾಯ್ದೆ)' ಎಂದು 2003ರಲ್ಲಿ ತಿದ್ದುಪಡಿ ಮಾಡಲಾಯಿತು.

ಈ ತಿದ್ದುಪಡಿಯ ಪರಿಣಾಮಗಳೆಂದರೆ:-

1.      ಗರ್ಭಧಾರಣಾಪೂರ್ವದ ಲಿಂಗ ಆಯ್ಕೆಯ ತಂತ್ರವನ್ನು ಅಧಿನಿಯಮದ ವ್ಯಾಪ್ತಿಯೊಳಗೆ ತರುವುದನ್ನು ಅಧಿನಿಯಮದ ತಿದ್ದುಪಡಿಯು ಮುಖ್ಯವಾಗಿ ಸೇರಿಸಿತು.

2.      ಅಲ್ಟ್ರಾಸೌಂಡ್ ಅನ್ನು ತನ್ನ ವ್ಯಾಪ್ತಿಗೆ ತಂದಿತು.

3.      ಕೇಂದ್ರ ಮೇಲುಸ್ತುವಾರಿ ಮಂಡಳಿಯನ್ನು ಸಶಕ್ತಗೊಳಿಸಿತು ಮತ್ತು ರಾಜ್ಯ ಮಟ್ಟದ ಮೇಲುಸ್ತುವಾರಿ ಮಂಡಳಿಯನ್ನು ರಚಿಸಲಾಯಿತು

4.     ಇನ್ನೂ ಕಠಿಣ ಶಿಕ್ಷೆಗಳಿಗೆ ಅವಕಾಶ ಕಲ್ಪಿಸಿತು

5.      ಉಲ್ಲಂಘಿತರ ಯಂತ್ರಗಳು ಹಾಗೂ ಉಪಕರಣಗಳನ್ನು ಹುಡುಕುವ, ವಶಕ್ಕೆ ತೆಗೆದುಕೊಳ್ಳುವ ಮತ್ತು ಸೀಲ್ ಮಾಡುವ ಸಾರ್ವಜನಿಕ ನ್ಯಾಯಾಲಯದ ಅಧಿಕಾರವುಳ್ಳ ಸೂಕ್ತ ಪ್ರಾಧಿಕಾರಗಳನ್ನು ಸಬಲೀಕರಿಸಿತು.

6.     ಅಲ್ಟ್ರಾಸೌಂಡ್ ಯಂತ್ರಗಳನ್ನು ಕೇವಲ ನೋಂದಾಯಿತ ಅಂಗಸಂಸ್ಥೆಗಳಿಗೆ ಮಾರಾಟ ಮಾಡುವ ನಿಯಂತ್ರಣ.

 

ರಾಜ್ಯ ಮಟ್ಟದ ಪಿ.ಸಿ.ಪಿ.ಎನ್.ಡಿ.ಟಿ  ಕಾರ್ಯಾಗಾರ ಚಿತ್ರಗಳು

PCPNDT Workshop

 

ಇತ್ತೀಚಿನ ನವೀಕರಣ​ : 21-06-2021 12:57 PM ಅನುಮೋದಕರು: MD NHM


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ರಾಷ್ಟ್ರೀಯ ಆರೋಗ್ಯ ಅಭಿಯಾನ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080